ಇಳಕಲ್: ಶಾಸಕರ ಪುತ್ರ ರಾಜುಗೌಡ ಪಾಟೀಲ ಕಾರ್ಯಕ್ರಮ ಒಂದರಲ್ಲಿ ಪ್ರತಿ ಸವಾಲು ಹಾಕಿದ್ದು ಯಾರು ಗಂಡಸರು ಎಂಬುವದನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತೋರಿಸಲಾಗುವುದು ನಾವು ಎಲ್ಲದಕ್ಕೂ ಸಿದ್ಧ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಅವರ ಪುತ್ರರ ಮೇಲೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾಡಿದ ಸವಾಲಿಗೆ ತಾಲೂಕಿನ ಹಿರೇಸಿಂಗನಗುತ್ತಿ ಗ್ರಾಮದ ತ್ರಿಮೂರ್ತಿ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ `ಕಳ್ಳ ಗುರು ಸುಳ್ಳ ಶಿಷ್ಯ’ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಮರು ಸವಾಲು ಹಾಕಿರುವ ರಾಜುಗೌಡ ಒಂದು ಹಂತದಲ್ಲಿ ನಾನೇ ಚುನಾವಣೆಗೆ ಸ್ಪರ್ಧಿಸುತ್ತೇನೆ ನನ್ನ ವಿರುದ್ಧ ಪೌರುಷ ತೋರಿಸು ಎಂದು ಹೇಳಿದ್ದಾರೆ.
ಸದ್ಯ ಈ ವಿಡಿಯೋ ಹುನಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಭಾರೀ ಬಿರುಗಾಳಿಯನ್ನು ಬೀಸಿದ್ದು 2023ರ ಚುನಾವಣಾ ಕಣ ಈಗಲೇ ಮತದಾರರಲ್ಲಿ ಕಾವು ಮೂಡಿಸುತ್ತಿದೆ.