ಸುಳ್ಳು ಸುದ್ದಿ ಹಬ್ಬಿಸಿದವರು ಕ್ಷಮೆಯಾಚಿಸಲಿ: ದೇಶಪಾಂಡೆ

ಆರ್.ವಿ. ದೇಶಪಾಂಡೆ
Advertisement

ಹಳಿಯಾಳ: ಪರೇಶ ಮೇಸ್ತಾ ಪ್ರಕರಣದಲ್ಲಿ ಸತ್ಯ ಹೊರಬಂದಿದೆ. ಸತ್ಯವೇನೆಂದು ರಾಜ್ಯದ ಜನತೆಗೆ ಗೊತ್ತಾಗಿದೆ. ಅದಕ್ಕಾಗಿ ಮೇಸ್ತಾ ಪ್ರಕರಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ರಾಜಕೀಯ ದುರ್ಲಾಬ ಪಡೆದವರು ಈಗಲಾದರೂ ತಾವು ಮಾಡಿದ ಪಾಪಕ್ಕಾಗಿ ಪಶ್ಚಾತಾಪ ಮಾಡಿಕೊಂಡು ರಾಜ್ಯದ ಜನತೆಯ ಹತ್ತಿರ ಕ್ಷಮೆಯಾಚಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಆಗ್ರಹಿಸಿದರು.
ಹಳಿಯಾಳದ ನಿವಾಸದಲ್ಲಿ ಆಯೋಜಿಸಿದ್ದ ತುರ್ತುಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೇಶ ಮೇಸ್ತಾ ಸಾವಿನ ಪ್ರಕರಣವನ್ನು ಭಾವನಾತ್ಮಕವಾಗಿ ಜನತೆಯ ಮುಂದೆ ಒಯ್ದು ಎಲ್ಲರನ್ನೂ ರೊಚ್ಚಿಗೆಬ್ಬಿಸಿ ದಾರಿ ತಪ್ಪಿಸಿದ ಬಿಜೆಪಿ ಮತ್ತು ಕೆಲವು ಹಿಂದೂ ಪರ ಸಂಘಟನೆಗಳ ಧೋರಣೆ ಖಂಡಿಸಿದರು.
ಮುಖವಾಡ ಕಳಚಿದೆ: ಮೇಸ್ತಾ ಸಾವು ಹೇಗೆ ಸಂಭವಿಸಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ಪ್ರಕಟಿಸಿದೆ. ಸಾವಿನ ಮನೆಯಲ್ಲೂ ರಾಜಕೀಯ ಮಾಡುವ, ನೋವಿನಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಅವರ ಕೌಟಂಬಿಕ ದುಃಖವನ್ನು ಬೀದಿಗೆ ತಂದು ರಾಜಕೀಯ ಮಾಡುವ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖವಾಡವನ್ನು ಸಿಬಿಐ ಮಂಡಸಿದ ತನಿಖಾ ವರದಿ ತೆರೆದಿಟ್ಟಿದೆ ಎಂದರು.