ಸುಮಕ್ಕ ಅವರೇ ಹೇಗಿದ್ದೀರಿ? ನೀವು ಖುಷಿ ಖುಷಿಯಾಗಿರುವಿರಿ ಎಂದು ಭಾವಿಸುವೆ. ನೀವು ನಮ್ಮ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ನಾನು ಬರಬೇಕಿತ್ತು. ನಿಮಗೇ ಗೊತ್ತಲ್ಲ… ನನಗೆ ಯಾವುದಕ್ಕೂ ಪುರುಸೊತ್ತು ಎಂಬುದೇ ಇಲ್ಲ. ಅದು ಹೋಗಲಿಬುಡಿ. ಸುಮಕ್ಕ.. ಈಸಲ ನಿಮಗೆ ಟಿಕೆಟ್ ಕೊಟ್ಟಿಲ್ಲ ಅಂತ ನೀವು ಸಿಟ್ಟಿಗೇಳುವುದು ಬೇಡ. ಸುಮಾರಣ್ಣೋರು… ಅವರ ಅಪ್ಪಾಜಿ ಅವರೆಲ್ಲ ಬಂದು ನಾವು ನಿಮ್ಕಡೆ…. ನಿಮ್ಕಡೆ ಅಂದಾಗ ನಮಗೆ ಬೇಡ ಅನ್ನಲಿಕ್ಕೆ ಆಗಲಿಲ್ಲ. ಮಗ್ಗುಲಲ್ಲಿ ಕೂಡಿಸಿಕೊಂಡಾಗ ಅವರನ್ನು ಬರಿಗೈಯಲ್ಲಿ ಇರಿ ಅಂತ ಅನ್ನುವುದಕ್ಕೆ ಹೇಗೆ ಸಾಧ್ಯ? ಅದಕ್ಕೆ ಅವರಿಗೆ ಟಿಕೆಟ್ ಕೊಟ್ಟಿರುವೆ ಅಂದ ಮಾತ್ರಕ್ಕೆ ನಾನೇನೂ ಅವರ ಜತೆ ಜಿಗ್ರಿ ದೋಸ್ತಿ ಮಾಡುತ್ತೇನೆ ಅಂತ ಅಲ್ಲ. ಮೇಲಿನ ಮಾತಿಗೆ ಬನ್ರೀ ಹೇಗಿದ್ದೀರಿ ಅಂತ ಹೆಗಲ ಮೇಲೆ ಕೈ ಹಾಕುತ್ತೇನೆ ಅಷ್ಟೆ. ಆವಾಗ ೨೦@೨೦ ಮ್ಯಾಚಿನಲ್ಲಿ ನಮಗೆ ಹೇಗೆ ಮಾಡಿದ್ದಾರೆ ಎಂದು ನಿಮಗೇ ಗೊತ್ತಲ್ಲ. ನಮ್ಮ ಸಿಟ್ಯೂರಪ್ಪ ಅವರೆಲ್ಲ ಅದೇ ಅಂದರು. ನೋಡ್ರಪ.. ಅಲ್ಲಿ ಎಲ್ಲ ಹದೆಗೆಡೆಸಿಕೊಂಡಿದ್ದೇ ನಮ್ಮ ಹುಡುಗರು. ನೀವೆಲ್ಲರೂ ಸರಿಯಾಗಿದ್ದಿದ್ದರೆ ನಾನ್ಯಾಕೆ ಅವರ ಜತೆ ದೋಸ್ತಿ ಮಾಡುತ್ತಿದ್ದೆ ಹೇಳಿ ನೋಡೋಣ ಎಂದು ಅಂದಾಗ ಅವೂ ಸುಮ್ಮನೇ ಗೋಣು ಆಡಿಸಿದವು. ಸ್ವಲ್ಪ ದಿನ ಇರಲಿ ನೋಡೋಣ ಅಂತ ನಾನೇ ಸಮಾಧಾನ ಹೇಳಿದ್ದೇನೆ. ಸುಮಕ್ಕೋರೆ ಇವೆಲ್ಲ ನಿಮಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಅಂತರಂಗ ಹೀಗಿದೆ. ಈಗ ನೀವು ಬಹಿರಂಗವಾಗಿ ಸುಮಾರಣ್ಣೊರು… ಸುಮಾರಣ್ಣೋರು ಅಂದಂಗೆ ಮಾಡಿ. ಇನ್ನೂ ನಾಲ್ಕೇ ವರ್ಷ. ಅಸೆಂಬ್ಲಿ ಎಲೆಕ್ಷನ್ನು ಬರ್ತವೆ. ಆಗ ನೀವು.. ನಿಮ್ಮುಡುಗ… ನೀವು ಯಾರಿಗೆ ಹೇಳ್ತೀರಿ ಅವರಿಗೆ ಟಿಕೆಟ್ ನೋಡನ. ನೀವು ಪಾರ್ಟಿ ಸೇರಿದ ಮೇಲೆ ಒಂದ್ಸಲ ರ‍್ರಿ ಕುಳಿತುಕೊಂಡು ಮಾತಾಡನ. ನೀವು ಸ್ಲೋ ಆಗಿ ಚಂದಗೆ ಮಾತಾಡ್ಕೊಂಡು ಇದ್ದುಬಿಡಿ…. ಮುಂದೆ ಏನಾಗುತ್ತೋ ನೀವೇ ನೋಡಿ… ಹಾಂ… ನಮ್ಮ ಸ್ಮೃತಿ ಅಲ್ಲೇ ಇದಾಳೆ… ಎಂಗೆ… ಏನು ಅಂತ ಮಾತಾಡ್ಕಳ್ಳಿ. ಆ ಮದ್ರಾಮಣ್ಣ… ಬಂಡೇಸಿ ಏನರ ಅಂದ್ರೆ…. ಮೈಕ್ ಮುಂದೆ ಬಂದು ಅಯ್ಯೋ ನಂಗೆ ಇಂಗಂದ್ರಪ್ಪೋ ಅಂತ ಸೆರಗಿನಿಂದ ಒಂದೆರಡು ಸಲ ಕಣ್ಣೀರು ಒರೆಸಿಕೊಂಡು ಬುಡಿ… ಅವರ ಗ್ಯಾರಂಟಿ ಎಲ್ಲ ಭುರ್ ಬುಸ್ ಆಗ್ತಾವೆ… ಕಣ್ಣೀರು ಹಾಕೋದು ನಾನೇನು ನಿಮಗೆ ಹೇಳಿಕೊಡಬೇಕಾಗಿಲ್ಲ. ಅಷ್ಟು ಮಾಡಿ ಆಯ್ತಾ… ಇನ್ನು ಮುಂದೆ ನೀವು ಸುಮಲತ ಅಲ್ಲ ಕಮಲತ…. ಕಮಲತ.. ಕಮಲತ.
ನಿಮ್ಮ ಸೋದಿಮಾಮೋರು