ಹುಬ್ಬಳ್ಳಿ: ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ತೊಡಗಿಸಿಕೊಳ್ಳಲು ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆಯಲು ಬಂದಿದ್ದೇನೆ. ಶ್ರೀಮಠದಲ್ಲಿ ರಾಜಕೀಯದ ಬಗ್ಗೆ ನಾನು ಮಾತನಾಡಲ್ಲ. ನಾನು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ, ನನ್ನ ರಾಜಕೀಯ ನಿಲುವುಗಳೇನು ಎಂಬುದರ ಬಗ್ಗೆ ಡಿ. 25ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲೇ ಘೋಷಣೆ ಮಾಡುತ್ತೇನೆ ಎಂದು ಗಣಿ ಉದ್ಯಮಿ ಜಿ. ಜನಾರ್ದನರೆಡ್ಡಿ ಹೇಳಿದರು.
ಸೋಮವಾರ ರಾತ್ರಿ ಶ್ರೀ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಶ್ರೀ ಸಿದ್ಧಾರೂಢರ ಅಂಗಾರ ಲೋಕಕ್ಕೆಲ್ಲ ಬಂಗಾರ, ಶ್ರೀ ಸಿದ್ಧಾರೂಢರ ಜೋಳಿಗೆ ಜಗತ್ತಿಗೆಲ್ಲ ಹೋಳಿಗೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದೇ ನಂಬಿಕೆಯನ್ನು ನಾನು ಹೊಂದಿದ್ದು, ಅವರ ಜೋಳಿಗೆಯಿಂದ ನನಗೂ ಒಂದು ಹೋಳಿಗೆ ದಯಪಾಲಿಸಲಿ ಎಂದು ಆಶೀರ್ವಾದ ಪಡೆಯಲು ಶ್ರೀಮಠಕ್ಕೆ ಬಂದಿದ್ದೇನೆ ಎಂದು ನುಡಿದರು.