ಹುಬ್ಬಳ್ಳಿ: ಇಲ್ಲಿನ ಶ್ರೀ ಸಿದ್ಧಾರೂಢಮಠದಲ್ಲಿ ಶಿವರಾತ್ರಿ ಮಹೋತ್ಸವ ಪ್ರಯುಕ್ತ ನಡೆದ ಒಂದು ವಾರದಿಂದ ನಡೆದ ಕಾರ್ಯಕ್ರಮಗಳು ಸೋಮವಾರ ಶ್ರೀ ಸಿದ್ಧಾರೂಢರಿಗೆ, ಶ್ರೀ ಗುರುನಾಥರೂಢರಿಗೆ ಕೌದಿ ಪೂಜೆ ನೆರವೇರಿಸುವ ಮೂಲಕ ಸಮಾಪಣೆಗೊಂಡವು.
ಯಾವುದೇ ಆಡಂಬರ ಪ್ರಿಯರಲ್ಲದ ಶ್ರೀ ಸಿದ್ಧಾರೂಢರು ಹಾಗೂ ಶ್ರೀ ಗುರುನಾಥರೂಢರಿಗೆ ಶ್ರೀಮಠದ ಟ್ರಸ್ಟ್ ಕಮೀಟಿ ನೇತೃತ್ವದಲ್ಲಿ ಶ್ರೀಮಠದ ಪರಂಪರೆಯಂತೆ ಕೌದಿ ಪೂಜೆ ನೆರವೇರಿಸಲಾಯಿತು. ಬಿಲ್ವ ಪತ್ರೆಯ ಮಾಲೆ ಹಾಕಿ ಪೂಜೆ ಸಲ್ಲಿಸಲಾಯಿತು. ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಅಸಂಖ್ಯಾತ ಭಕ್ತರು ಕೌದಿ ಪೂಜೆಯಲ್ಲಿ ಪಾಲ್ಗೊಂಡು ಉಭಯ ಆರೂಢರ ದರ್ಶನ ಪಡೆದರು.