ಬಾಗಲಕೋಟೆ: ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಸಿದ್ದು ಸವದಿ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ರಬಕವಿಯ ಬಸ್ ನಿಲ್ದಾಣದಿಂದ ಸುಮಾರು 2 ಕಿಮೀನಷ್ಟು ಅದ್ದೂರಿ ರೋಡ್ ಶೋ ನಡೆಸಿ ಎತ್ತಿನ ಬಂಡಿ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಗುರುವಾರ ಬೆಳಿಗ್ಗೆ ಕಾಡಸಿದ್ಧೇಶ್ವರ, ಮಲ್ಲಿಕಾರ್ಜುನ ದೇವರು ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಪೂಜೆಗೈದು ಸಾವಿರಾರು ಕಾರ್ಯಕರ್ತರಿಂದ ರೋಡ್ ಶೋ ನಡೆಸಿದರು.
ಲಘು ಲಾಠಿ ಪ್ರಹಾರ
ಭಾರಿ ಜನಸ್ತೋಮದೊಂದಿಗೆ ತಹಶೀಲ್ದಾರ್ ಕಚೇರಿವರೆಗೆ ತೆರಳುವ ಸಂದರ್ಭ ಪೊಲೀಸ್ ಠಾಣೆ ವೃತ್ತದ ಬಳಿ ಪೊಲೀಸರಿಂದ ಬ್ಯಾರಿಕೇಡ್ ಹಾಕಿ ಸಾರ್ವಜನಿಕರಿಗೆ ನಿಷೇಧ ಹೇರಲಾಗಿತ್ತು. ಏಕಾಏಕಿ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡ ಕಾರಣ ಭಾರಿ ಕೋಲಾಹಲ ಉಂಟಾಗಿತ್ತು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸುತ್ತಿದ್ದಂತೆಯೇ ಕಾರ್ಯಕರ್ತರು ರಸ್ತೆಯೇ ಮೇಲೆ ಬಿದ್ದು ಎದ್ದು ಓಡುವ ಪ್ರಸಂಗ ನಡೆಯಿತು.