ಸಿದ್ದರಾಮಯ್ಯ ಅವರನ್ನು ಎರಡನೇ ಭಾರಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಡಿಕೆ ಶಿವಕುಮಾರ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ನಿನ್ನೆ ರಾತ್ರಿ ಕೆ.ಸಿ. ವೇಣುಗೋಪಾಲ ಮನೆಯಲ್ಲಿ ಸಭೆ ನಡೆದಿದ್ದು ಸಭೆಯಲ್ಲಿ ಮನವೊಲಿಕೆ ಯಶಸ್ಸಿಯಾಗಿದೆ. ಸೋನಿಯಾ ಗಾಂಧಿ ಹೇಳಿದ್ದ ಸೂತ್ರ ಮುಂದಿಟ್ಟು ಮನವೊಲಿಕೆ ಮಾಡಿದ್ದು ಯಶಸ್ವಿಯಾಗಿದೆ.
ಇಂದು ಸಂಜೆ ಸಿಎಲ್ ಪಿ ಸಭೆ ನಡೆಯಲಿದ್ದು ಅಧಿಕೃತ ಘೋಷಣೆಯಾಗಲಿದೆ. ಸದ್ಯ 30-30 ಸೂತ್ರದ ಮೇಲೆ ಮುಖ್ಯಮಂತ್ರಿ ಆಯ್ಕೆ ಮಾಡಲಾಗಿದೆ. ಎರಡು ವರ್ಷ ಆರು ತಿಂಗಳ ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.