ಸಿದ್ದರಾಮಯ್ಯ ಬಳಿ ಒಟ್ಟು ಎಂಟು ವಾಚ್ ಗಳಿವೆ; ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ…

Advertisement

ಬೆಂಗಳೂರು: ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ 8 ವಾಚ್ ಗಳನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಛಲವಾದಿ ನಾರಾಯಣಸ್ವಾಮಿ ಅವರು ‘ಸಿದ್ದರಾಮಯ್ಯ ಅವರು ಹೈದರಾಬಾದ್ ಮೂಲದ ವಿಜಯ್ ಮಂದಾನಿ ಅವರಿಂದ ಕೋಟ್ಯಂತರ ರೂ ಬೆಲೆ ಬಾಳುವ ರೋಲೆಕ್ಸ್ ವಾಚ್ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಮೈಸೂರಿನ ತಮ್ಮ ನಿವಾಸದಲ್ಲಿ ಅವರು ಉಡುಗೊರೆ ಪಡೆದಿದ್ದಾರೆ ಎಂದು ಅರೋಪಿಸಿದ್ಧಾರೆ.

ಸಿದ್ದರಾಮಯ್ಯ ಬಳಿ ಒಟ್ಟು ಎಂಟು ವಾಚ್ ಗಳಿವೆ. ಹೈದರಾಬಾದ್ ಮೂಲದ ಉದ್ಯಮಿ ವಿಜಯ್ ಮಂದಾನಿ ಕೋಲ್ ಡೀಲ್ ನಲ್ಲಿ ಸಿದ್ದರಾಮಯ್ಯ ಅವರಿಗೆ ಮೈಸೂರಿನಲ್ಲಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ಧಾರೆ. ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಒಟ್ಟು 8 ವಾಚ್ ಪಡೆದುಕೊಂಡಿದ್ದಾರೆ. ಸದ್ಯದಲ್ಲೇ ಎಲ್ಲಾ ವಾಚ್ ಗಳ ಇತಿಹಾಸ ಬಿಚ್ಚಿಡ್ತೀನಿ. ಸಿದ್ದರಾಮಯ್ಯ ಅವರು ಕೆಂಪಣ್ಣ, ಕೆಂಪಯ್ಯನ ಇಟ್ಕೊಂಡು ಓಡಾಡ್ತಿದ್ರು ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ಧಾರೆ.