ಸಿದ್ದರಾಮಯ್ಯ ಕಾಂಗ್ರೆಸ್ ಕಂಪನಿಯ ಜೋಕರ್‌

b sriramulu
Advertisement

ಕಾಂಗ್ರೆಸ್ ಸಾರ್ವಜನಿಕ ಸಭೆ ಒಂದು ಸರ್ಕಸ್ ಕಂಪನಿಯಂತಿದ್ದು, ಆ ಕಂಪನಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೋಕರ್‌ನಂತೆ. ಯುದ್ಧಭೂಮಿಯಲ್ಲಿ ಜಂಬಕೊಚ್ಚಿಕೊಳ್ಳುವ ಉತ್ತರಕುಮಾರನಂತೆ ಕಾಣುತ್ತಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ತಮ್ಮನ್ನು ಪೆದ್ದ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಇಂದು ಸುದ್ದಿಗೋಷ್ಠಿಯಲ್ಲಿ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಪರಿಯಿದು.
ಸಿದ್ದರಾಮಯ್ಯ ರಾಜಕಾರಣದ ಶಕುನಿ ಇದ್ದಂತೆ, ಅವರ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದಾಗ ಅದು ಸ್ಪಷ್ಟವಾಗುತ್ತದೆ. ಮೊದಲು ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ, ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಜೆಡಿಎಸ್‌ಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ನಂತರ ಕಾಂಗ್ರೆಸ್‌ಗೆ ಬಂದರು. ಅಲ್ಲಿ ಪಕ್ಕದಲ್ಲೇ ಇದ್ದು ಖರ್ಗೆಯವರನ್ನು ತುಳಿದರು. ತನ್ನ ಸಿಎಂ ಸ್ಥಾನಕ್ಕೆ ಅಡ್ಡಿಯಾಗಲಿದ್ದಾರೆ ಎಂದು ಡಾ. ಜಿ.ಪರಮೇಶ್ವರರನ್ನು ಸೋಲಿಸಿದರು. ಇದೀಗ ಪುನಃ ಪಕ್ಕದಲ್ಲೇ ಇದ್ದು ಡಿ.ಕೆ.ಶಿವಕುಮಾರ್ ಅವರ ಬೆನ್ನಿಗೆ ಚೂರಿ ಹಾಕುವ ದ್ರೋಹಿ. ಡಿಕೆಶಿ ವಿರುದ್ಧ ದಾಖಲೆಗಳಿವೆ ಎಂದು ಬೇರೆಯವರ ಕದ ಬಡಿಯುತ್ತೀದ್ದಿರಿ ಎಂದು ಆರೋಪಿಸಿದರು.