ಗೋಕಾಕ: ಸಿಡಿ ಕಾರ್ಖಾನೆ ಬೆಳಗಾವಿಯಲ್ಲಿಯೇ ಇದೆ. ಬೆಳಗಾವಿಯಿಂದ ತಯಾರಾಗಿ ಕನಕಪುರ ಮತ್ತು ಬೆಂಗಳೂರಿನಲ್ಲಿ ರಿಲೀಸ್ ಆಗುತ್ತದೆ. 2000 ಇಸ್ವಿಯಿಂದ ಸಿಡಿ ಕಾರ್ಖಾನೆ ಚಾಲ್ತಿಯಲ್ಲಿದ್ದು, ಸಿಬಿಐ ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ. ಕೆಪಿಸಿಸಿ ಅಂದ್ರೆ ಕರ್ನಾಟಕ ಪ್ರದೇಶ್ ಸಿಡಿ ಕಮಿಟಿ ಎಂದು ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಖರ್ಗೆ, ಪರಮೇಶ್ವರ, ಸಿದ್ದರಾಮಯ್ಯ ಸಾಹೇಬರು ಇದ್ದಾಗ ಕಾಂಗ್ರೆಸ್ ಬೇರೆ ಇತ್ತು. ಸಿದ್ದರಾಮಯ್ಯ, ಖರ್ಗೆ ಸಾಹೇಬರು ನಮ್ಮ ಗುರುಗಳು ಅಂತಾ ಒಪ್ಪುತ್ತೇವೆ. ಕಾಂಗ್ರೆಸ್‌ನಲ್ಲಿ ಡಿಕೆಶಿ ಬಗ್ಗೆ ಯಾರೂ ಮಾತನಾಡಲ್ಲ. ಎಲ್ಲರ ಸಿಡಿ ಅವನ ಬಳಿ ಇವೆ ಎಂದು ಆರೋಪಿಸಿದರು.
ಸಿಡಿ ಪ್ರಕರಣಕ್ಕೆ ಮಾರ್ಚ್ 3ನೇ ತಾರೀಖಿಗೆ ಎರಡು ವರ್ಷ ಆಯ್ತು, ಷಡ್ಯಂತ್ರ ನಡೆದಿದೆ. ಇದಕ್ಕೆ ಸಿಬಿಐ ತನಿಖೆ ಒಂದೇ ಪರಿಹಾರ ಎಂದು ಅಭಿಪ್ರಾಯಪಟ್ಟರು.