ಸಿಡಿಲು ಬಡಿದು ಯುವಕ ಸಾವು

Advertisement

ಚಿಟಗುಪ್ಪ(ಬೀದರ್): ತಾಲೂಕಿನ ಇಟಗಾ ಗ್ರಾಮದ ಬಳಿ ಭಾನುವಾರ ಮಧ್ಯಾಹ್ನ ಸಿಡಿಲು ಬಡಿದು ಯುವಕನೋರ್ವ ಸಾವನಪ್ಪಿದ್ದಾನೆ.
ಪಟ್ಟಣದ ಇನಾಯತ್(೧೭) ಸೈಯದ್ ಅಲಿ ಮುದನಾಳವಾಲೆ ಸಾವನಪ್ಪಿದ ಯುವಕ. ಕೂಲಿ ಕೆಲಸಕ್ಕೆಂದು ಇಟಗಾ ಗ್ರಾಮಕ್ಕೆ ತೆರಳಿ ಮರಳಿ ಬರುವಾಗ ಗುಡುಗು ಸಹಿತ ಮಳೆ ಸುರಿದ ಕಾರಣ ಮರದ ಕೆಳಗೆ ತನ್ನ ತಾಯಿಯ ಜತೆ ಆಶ್ರಯ ಪಡೆದಿದ್ದ. ಈ ಸಮಯದಲ್ಲಿ ಸಿಡಿಲು ಎರಗಿ ಯುವಕ ತೀವ್ರವಾಗಿ ಅಸ್ವಸ್ಥಗೊಂಡಿದ್ದ. ಕೂಡಲೇ ಚಿಟಗುಪ್ಪ ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಮನಾಬಾದ್‌ಗೆ ಅಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನಪ್ಪಿದ್ದಾನೆ. ಈ ಕುರಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.