ಬೆಳಗಾವಿ: ನೇಕಾರರ ಸಮಸ್ಯೆ ಪರಿಹಾರ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ ಪಾಟೀಲರು ಸಿಎಂ ಕರೆದ ಸಭೆಯಲ್ಲಿ ಬಹಿಷ್ಕರಿಸುವ ಮಾತುಗಳನ್ನು ಆಡಿದ್ದು ಈಗ ಚರ್ಚೆಯ ವಸ್ತುವಾಗಿದೆ.
ನೇಕಾರರ ಸಮ್ಮಾನ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕಳೆದ ದಿನ ಶಾಸಕರ ಮತ್ತು ಅಧಿಕಾರಿಗಳ ಸಭೆ ಕರೆದಿದ್ದರು.
ಈ ಸಂದರ್ಭದಲ್ಲಿ ಯೋಜನೆ ಜಾರಿಗೆ ಮುಂದಾಗಬೇಕಿದ್ದ ಅಧಿಕಾರಿಗಳು ಅದಕ್ಕೆ ಹಲವು ನೆಪ ಹೇಳತೊಡಗಿದರು.
ಇದನ್ನು ಕಂಡು ಕೆಂಡಾಮಂಡಲವಾದ ಶಾಸಕ ಅಭಯ ಪಾಟೀಲರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಸಭೆಯನ್ನೇ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದರು ಎಂದು ಗೊತ್ತಾಗಿದೆ