ಸಿಎಂ ಬೆಂಗಾವಲು ವಾಹನದ ಮೇಲೆ ಶಂಕಿತ ಉಗ್ರರ ದಾಳಿ

Advertisement

ಮಣಿಪುರ ಮುಖ್ಯಮಂತ್ರಿಯ ಭದ್ರತಾ ತಂಡದ ಭದ್ರತಾ ಬೆಂಗಾವಲು ಪಡೆಯ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ.
ಇಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿ 37ರ ಇಂಫಾಲ್-ಜಿರಿಬಮ್‌ ರಸ್ತೆಯಲ್ಲಿ ಸುತ್ತುವರಿದು ನಡೆಸಿದ ದಾಳಿಯಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಂಫಾಲದಿಂದ 26 ಕಿಮೀ ದೂರದಲ್ಲಿರುವ ಟಿ ಲೈಜಂಗ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗಾಯಾಳುವನ್ನು ಬಿಷ್ಣುಪುರ್‌ ಜಿಲ್ಲೆಯ ತಂಗ ನಗರಮ್‌ ಲೀಕೈ ನಿವಾಸಿಯಾಗಿರುವ 32 ವರ್ಷದ ಮೊಯಿರಂಗ್ತೆಮ್‌ ಅಜೇಶ್‌ ಎಂದು ಗುರುತಿಸಲಾಗಿದೆ. ದಾಳಿ ನಡೆದಾಗ ಬೆಂಗಾವಲು ಪಡೆ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿತ್ತು. ಭದ್ರತಾ ಪಡೆಗಳ ವಾಹನಗಳ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆಸಲಾಯಿತು. ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದರು ಒಬ್ಬ ಭದ್ರತಾ ಸಿಬ್ಬಂದಿಗೆ ಎಡ ಭುಜದ ಹಿಂಭಾಗದಲ್ಲಿ ಅವರಿಗೆ ಗುಂಡೇಟು ತಗಲಿದ್ದು ಇಂಫಾಲದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.