ಸಿಎಂ ನಾಯಿ ಮರಿ ಎಂದು ಹೇಳಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Advertisement

ಮುಖ್ಯಮಂತ್ರಿಗಳಿಗೆ ಧೈರ್ಯ ಇರಬೇಕು ಎನ್ನುವ ಅರ್ಥದಲ್ಲಿ ನಾನು ಪ್ರಧಾನಿ ಮೋದಿ ಅವರ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಯಿಮರಿಯಂತೆ ನಿಂತುಕೊಳ್ತಾರೆ ಎಂದು ಹೇಳಿದ್ದೇನೆ ಹೊರತು ಮುಖ್ಯಮಂತ್ರಿ ಅವರನ್ನು ನಾಯಿ ಮರಿ ಎಂದು ಹೇಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ಅನುದಾನ ತರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದನ್ನು ಕೇಳಲು ಧೈರ್ಯ ಬೇಕು. ನಾಯಿ ಮರಿ ಹಾಗೇ ಇರಬಾರದು ಎಂದಿದ್ದೆ. ಹೀಗೆ ಹೇಳುವುದು ಅಸಾಂವಿಧಾನವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಜನ ನನ್ನ ಟಗರು, ಹುಲಿಯಾ ಎಂದು ಕರೆಯುತ್ತಾರೆ ಅದು ಅಸಾಂವಿಧಾನಕವೇ ಪ್ರಶ್ನಿಸಿದರು.