ಸಿಎಂ ಆಗೋದು ಹೈಕಮಾಂಡ್ ನೀಡುವ ಪ್ರಸಾದ. ನಾನು ಸಿಎಂ ಆಗೋದಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂದು ನಮ್ಮ ಹೈಕಮಾಂಡ ಹೇಳುತ್ತಾರೆ. ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅವರು ಏನು ಹೇಳುತ್ತಾರೋ ಅದೇ ನನ್ನ ಪ್ರಸಾದ ಎಂದು ಡಿಕೆಶಿ ಹೇಳಿದ್ದಾರೆ.