ವಿಜಯನಗರ: ಸಾಹಿತಿ ಕುಂ ವೀರಭದ್ರಪ್ಪ ಅವರಿಗೆ ಮತ್ತೆ ಬೆದರಿಕೆ ಪತ್ರ ಬಂದಿದೆ.
ಇಂದಲ್ಲ ನಾಳೆ ಅಧರ್ಮದಿಂದ ತುಂಬಿರುವ ನಿಮ್ಮಜೀವ ಎಂಬ ಅಜ್ಞಾನದ ದೀಪ ಆರುವುದು ನಿಶ್ಚಿತ ನಿಶ್ಚಿತ ಕುಂ.ವೀರಭದ್ರದ್ರ ನಿಶ್ಚಿತ ನಿನ್ನ ಅಂತ್ಯ ಎಂದು ಪತ್ರದಲ್ಲಿ ಬರೆದಿದ್ದಾರೆ.
ರಾಜ್ಯದಲ್ಲಿ ಕಂಪನ ಆಡಳಿತ ಪ್ರಾರಂಭವಾಗಿದೆ. ಹಿಂದು ಸಜ್ಜನರಿಗೆ ಇದು ಸಂಕಷ್ಟದ ಸರ್ಕಾರ. ನಿಮ್ಮ ಕುಲ ವೀರಭದ್ರ ನಿಮ್ಮಂತಹ ದುರ್ಜನ ದೇಶದ್ರೋಹಿಗಳಿಗೆ ಮತ್ತು ಮತಾಂಧ ಮುಸ್ಲಿಮರಿಗೆ, ಮತಾಂತರಿ ಕ್ರೈಸ್ತರಿಗೆ ಸಂಪ್ರಿಯಾ ಸರ್ಕಾರ. ಉರಿಯಿರಿ ಮಕ್ಕಳಾ ಉರಿಯಿರೀ.., ಎಂದು ಪತ್ರದಲ್ಲಿ ಬರೆದು ಕಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಾಹಿತಿ ಕುಂ ವೀರಭದ್ರಪ್ಪ ಅವರು ʼಇದು ನನಗೆ ಬಂದಿರುವುದು 16ನೇ ಬೆದರಿಕೆ ಪತ್ರ. ಬಂದಿರುವ ಬೆದರಿಕೆ ಪತ್ರಗಳು ನನಗೆ ಪ್ರೇಮ ಪತ್ರಗಳಿದ್ದಂತೆ ಎಂದಿದ್ದಾರೆ.