ಸಾವಿನಲ್ಲೂ ಒಂದಾದ ತಾಯಿ-ಮಗ !

ತಾಯಿ ಮಗ
Advertisement

ಬಾಗಲಕೋಟೆ: ತಾಯಿ ಮಗ ಇಬ್ಬರೂ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಶುಕ್ರವಾರ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ಸಂಭವಿಸಿದೆ.
ಕಳೆದೊಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗ್ರಾಮದ ದಶರಥ ದುರ್ವೆ(60) ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಸಾವನ್ನಪ್ಪಿದರೆ, ಮಗನ ಅಗಲಿಕೆಯನ್ನು ಸಹಿಸಲಾಗದೆ ಅಪಾರ ನೋವಿನಲ್ಲಿದ್ದ ಅವರ ತಾಯಿ ಶಾವಕ್ಕ ದುರ್ವೆ(90) ಶುಕ್ರವಾರ ಸಂಜೆ 6.30ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರಿಬ್ಬರ ಅಂತ್ಯಕ್ರಿಯೆ ಶನಿವಾರ ಕಲಾದಗಿಯಲ್ಲಿ ನಡೆಯಲಿದೆ.