ಕಲಬುರಗಿ: ಇಲ್ಲಿನ ಸೂಪರ್ ಮಾರುಕಟ್ಟೆ ಪ್ರದೇಶದಲ್ಲಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕರ ಮೇಲೆ ದಾದಾಗಿರಿ ಮಾಡುತ್ತಿದ್ದ ವ್ಯಕ್ತಿಯ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
ರವಿವಾರ ರಾತ್ರಿ ಸೂಪರ್ ಮಾರುಕಟ್ಟೆ ಪ್ರದೇಶದಲ್ಲಿ ಅಬ್ದುಲ್ ಜಾಫರ್ ಸಾಬ್ ಎಂಬ ವ್ಯಕ್ತಿ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಸಾರ್ವಜನಿಕರನ್ನು ಬೆರಿಸುತ್ತಿದ್ದ.
ಈ ವೇಳೆ ಪೊಲೀಸರು ಶರಣಾಗುವಂತೆ ತಿಳಿಸಿದರೂ ಅಬ್ದುಲ್ ತನ್ನ ಪುಂಡಾಟ ಮುಂದುವರೆಸಿದ್ದ. ಅಬ್ದುಲ್ ಕೈಯಲ್ಲಿರುವ ಮಾರಕಾಸ್ತ್ರ ವಶ ಪಡಿಸಿಕೊಳ್ಳಲು ಮುಂದಾದ ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾದ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಅಬ್ದುಲ್ ಕಾಲಿಗೆ ಮೂರು ಗುಂಡುಗಳನ್ನು ಹಾರಿಸಿದ್ದಾರೆ.
ಪಿಎಸ್ ಐ ವಾಹಿದ್ ಕೋತ್ವಾಲ್ ಆರೋಪಿ ಕಾಲಿಗೆ ಫೈರಿಂಗ್ ಮಾಡಿದ್ದು, ಫೈರ್ ಮಾಡುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.