ಸಾರ್ವಜನಿಕರು-ಅಧಿಕಾರಿಗಳ ಎದುರೇ ಸಂಸದ ಮತ್ತು ಶಾಸಕರ ಮಧ್ಯೆ ಹೊಡೆದಾಟ

Advertisement

ಕೋಲಾರ: ಸಾರ್ವಜನಿಕರು ಮತ್ತು ಅಧಿಕಾರಿಗಳ ಎದುರೇ ಸಂಸದ ಮತ್ತು ಶಾಸಕರ ಮಧ್ಯೆ ಹೊಡೆದಾಟದ ಘಟನೆ ನಡೆದಿದೆ, ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್‌ ಮುನಿಸ್ವಾಮಿ ಹಾಗೂ ಶಾಸಕ ಎಸ್‌ಎನ್ ನಾರಾಯಣಸ್ವಾಮಿ ನಡುವೆ ವೇದಿಕೆಯ ಮೇಲೆಯೇ ಮಾತಿನ ಚಕಮಕಿ ನಡೆದಿದ್ದು, ಬಹಿರಂಗವಾಗಿಯೇ ಕೈ – ಕೈ ಮಿಲಾಯಿಸಲು ಜನಪ್ರತಿನಿಧಿಗಳು ಮುಂದಾಗಿದ್ದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಸಂಸದರನ್ನು ವೇದಿಕೆಯಿಂದ ಕರೆದುಕೊಂಡು ಹೋಗಿದ್ದಕ್ಕೆ ಸಂಭಾವ್ಯ ಗಲಾಟೆ ತಪ್ಪಿದೆ.
ಸರ್ಕಾರಿ ಜಮೀನು ಒತ್ತುವರಿ ತೆರವು ವಿಚಾರ. ರೈತರನ್ನು ಒಕ್ಕಲು ಎಬ್ಬಿಸುವ ಮೊದಲು ರಾಜಕಾರಣಿಗಳು ಗೋಮಾಳ ಕೆರೆ ಒತ್ತುವರಿ ಮಾಡಿ ಲೇಔಟ್ ನಿರ್ಮಿಸಿರುವುದನ್ನು ತೆರವು ಮಾಡಿ ಹೀರೋ ಎನಿಸಿಕೊಳ್ಳಿ. ಅಧಿಕಾರಿಗಳಿಗೆ ಸಂಸದ ಮುನಿಸ್ವಾಮಿ ಸವಾಲು ಹಾಕಿದಾಗ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮತ್ತು ಸಂಸದರ ಮಧ್ಯೆ ವಾಕ್ಸಮರ ಮಾತಿಗೆ ಮಾತು ಬೆಳೆದು ವೇದಿಕೆ ಮೇಲೆ ವೇದಿಕೆ ಮೇಲೆ ಕುಳಿತಿದ್ದ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರತ್ರ ಹೊಡೆದಾಡಲು ಏರಿ ಹೋದ ಸಂಸದ ಮುನಿಸ್ವಾಮಿ. ಶಾಸಕರನ್ನು ಸಮಾಧಾನಪಡಿಸಿ ಹಿಡಿದುಕೊಂಡ ಸಚಿವ ಭೈರತಿ ಸುರೇಶ್ ಮತ್ತು ಸಂಸದರನ್ನು ಅಕ್ಷರಶಃ ಬಿಗಿದಪ್ಪಿಕೊಂಡು ವೇದಿಕೆಯಿಂದ ಹೊರಗೆ ಕರೆದುಕೊಂಡು ಹೋದರು.