ಸಾರಿಗೆ ನೌಕರರಿಗೆ ರಜೆ ಮತದಾರರಿಗೆ ತೊಂದರೆ

Advertisement

ಬೆಂಗಳೂರು: ಲೋಕಸಭೆ ಚುನಾವಣೆ ಮತದಾನದ ವೇಳೆ ಸಾರಿಗೆ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಆದರೆ, ಆ ದಿನ ಬಸ್‌ಗಳು ಓಡಾಡುವುದಿಲ್ಲವೇ, ಸಾಮಾನ್ಯ ಜನರು ಪ್ರಯಾಣಿಸಿ ಮತ ಚಲಾಯಿಸುವುದು ಹೇಗೆ ಎಂಬ ಪ್ರಶ್ನೆ ಉದ್ಬವಿಸಿದೆ.
ಈಗಾಗಲೇ ರಾಜ್ಯ ಸರಕಾರ ಸಾರ್ವಜನಿಕ ರಜೆ ನೀಡಿದೆ. ಅದರ ಬೆನ್ನಲ್ಲೇ ಎರಡು ಹಂತದ ಮತದಾನದ ವೇಳೆ ಏಪ್ರಿಲ್ ೨೬ ಮತ್ತು ಮೇ ೭ ರಂದು ಮತದಾನ ನಡೆಯಲಿದೆ. ಆ ದಿನಗಳಲ್ಲಿ ಆಯಾ ಲೋಕಸಭಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎಸ್‌ಆರ್‌ಟಿಸಿ ನಿಗಮದ ಕೇಂದ್ರ ಕಚೇರಿ, ವಿಭಾಗೀಯ ಕಚೇರಿಗಳು, ತರಬೇತಿ ಕೇಂದ್ರಗಳಿಗೆ ಸಾರ್ವತ್ರಿಕ ರಜೆ ನೀಡಲಾಗಿದೆ. ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಶೇ.೨೦ ರಷ್ಟು ಮತದಾರರು ಮತದಾನದ ವೇಳೆ ಬಸ್‌ಗಳಲ್ಲಿ ಪ್ರಯಾಣ ಬೆಳೆಸಿ ತಮ್ಮ ಹಕ್ಕುಗಳನ್ನು ಚಲಾಯಿಸುತ್ತಾರೆ. ವಿವಿಧ ಖಾಸಗಿ ಕಂಪನಿ, ಕೂಲಿ ಕಾರ್ಮಿಕರು ಮತದಾನ ವೇಳೆ ತಮ್ಮ ತಮ್ಮ ಊರುಗಳಿಗೆ ಹೋಗಿ ಮತದಾನ ಮಾಡುತ್ತಾರೆ. ಆದರೆ, ಬಸ್‌ಗಳು ಇಲ್ಲದಿದ್ದರೆ ವೋಟ್ ಹಾಕುವುದು ಹೇಗೆ ಎಂಬ ಪ್ರಶ್ನೆ ಉದ್ಬವವಾಗಿದೆ.