ಸಾಮಾನ್ಯ ಸಭೆಯಲ್ಲಿ ಮತ್ತೆ ಮಾರ್ದಣಿಸಿದ `ಗೌನ್’

ಗೌನ
Advertisement

ಧಾರವಾಡ: ಮಹಾನಗರ ಪಾಲಿಕೆ ಅಮೃತ ಮಹೋತ್ಸವ ಭವನದಲ್ಲಿ ಶುಕ್ರವಾರ ನಡೆದ ಮಹಾನಗರ ಪಾಲಿಕೆ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಗೌನ್ ಧರಿಸುವ ವಿಷಯ ಮತ್ತೆ ಮಾರ್ದಣಿಸಿತು.
ದುಃಖ ಸೂಚಕ ಗೊತ್ತುವಳಿ ಮಂಡನೆ ಬಳಿಕೆ ನಡೆದ ಸಭೆ ಆರಂಭದಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲಾ, ಮೇಯರ್ ಈರೇಶ ಅಂಚಟಗೇರಿ ಅವರಿಗೆ ಗೌನ್ ಏಕೆ? ಧರಿಸಿಲ್ಲ ಎಂಬ ಪ್ರಶ್ನೆಗೆ ಕೆಲ ಸದಸ್ಯರು ಧ್ವನಿಗೂಡಿಸಿದರು.
ಗೌನ್ ಧಾರಣೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿತ್ತು. ಗೌನ್ ಧಾರಣೆ ಮೇಯರ್ ವಿವೇಚನೆಗೆ ಬಿಟ್ಟಿರುವ ಆದೇಶ ಪತ್ರ ಬಂದಿದೆ ಎಂದರು. ಈ ವೇಳೆ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಓದಿದರು.
ಬಳಿಕ ಮಾತನಾಡಿದ ಮೇಯರ್, ಆಯುಕ್ತರು ಆದೇಶದಲ್ಲಿರುವ ವಿಷಯ ತಿಳಿಸಿದ್ದಾರೆ. ಈ ಕಾರಣಕ್ಕೆ ಗೌನ್ ಧರಿಸಿಲ್ಲ ಎಂದು ಈರೇಶ ಅಂಚಟಗೇರಿ ಹೇಳಿದರು.
ಆದರೆ, ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಗೌನ್ ವಿಷಯ ಕುರಿತು ಚರ್ಚೆಗೆ ಅವಕಾಶ ಕೋರಿದರು. ಶೂನ್ಯ ವೇಳೆಯಲ್ಲಿ ಅವಕಾಶ ಮಾಡಿಕೊಡುವ ಮೇಯರ್ ಮಾತುಗಳು ಪ್ರತಿಪಕ್ಷದ ಸದಸ್ಯರನ್ನು ತಣ್ಣಗಾಗಿಸಲಿಲ್ಲ.