ಬೆಂಗಳೂರು: ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ‘ಕಾವೇರಿ ನಮ್ಮದು‘ ಎಂಬ ಅಭಿಯಾನದ ಮೂಲಕ ಲಕ್ಷಾಂತರ ಪೋಸ್ಟ್ ಮೂಲಕ ಟ್ರೇಡಿಂಗ್ ಆಗಿದೆ . #ಕಾವೇರಿನಮ್ಮದು ಎಂಬ ಹ್ಯಾಶ್ ಟ್ಯಾಗ್ ಸಖತ್ ಟ್ರೆಂಡ್ ಆಗಿದೆ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ಅನೇಕ ಸಂಘಟನೆಗಳ ನಾಯಕರು ಮನವಿ ಮಾಡುತ್ತಿದ್ದಾರೆ. ಕನ್ನಡ ನಟರು, ಸಾಮಾಜಿ ಕಾರ್ಯಕರ್ತರು, ರಾಜಕೀಯ ನಾಯಕರು ಸೇರಿ ಸ್ವಯಂ ಪ್ರೇರಿತರಾಗಿ ಅನೇಕರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು ಲಕ್ಷಾಂತರ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.