ಸಹನಶೀಲತೆಯೇ ದೊಡ್ಡ ಧರ್ಮ

PRATHAPPHOTOS.COM
Advertisement

ಜೀವನದಲ್ಲಿ ನಮ್ಮ ಇಚ್ಛೆಗೆ ಅನುಗುಣವಾಗಿ ಒಂದೆರಡು ಪ್ರಸಂಗಗಳು ನಡೆದ ಮಾತ್ರಕ್ಕೆ, ತಮ್ಮ ತಲೆ ಕೆಡಿಸಿಕೊಂಡು ಇನ್ನೊಬ್ಬರ ತಲೆಯನ್ನು ಕೆಡಿಸಿ ಕಲಹ ಮಾಡಿ, ನಾನಾ ರೀತಿಯ ವಿರಸವಾಗುವಂತೆ ಮಾಡಿಕೊಳ್ಳುತ್ತಿರಲ್ಲ ಯಾಕೆ?
ದೇವರೇ ಸ್ವತಃ ನನ್ನನ್ನು ಸ್ಮರಿಸಿ ಸಾಕು.. ಎಂದು ಹೇಳಿದ್ದಾನೆ. ಸಹನಶೀಲತೆಯ ಪರಿಪೂರ್ಣ ಸಾಗರನಾಗಿದ್ದಾನೆ ಪರಮಾತ್ಮ ಎಂದು ಭಗವಂತನನ್ನು ಸ್ಮರಿಸಿದರೆ ಸಾಕು, ಆ ಸಹಶೀಲತೆಯ ಒಂದಂಶವಾದರೂ ನಮ್ಮಲ್ಲಿ ಬರುತ್ತದೆ. ದೇವರಲ್ಲಿ ಯಾವ ಗುಣ ಇದೆಯೆಂದು ಚಿಂತನೆ ಮಾಡುತ್ತಿವೊ ಅದೇ ಗುಣ ನಮ್ಮಲ್ಲೂ ಬರುತ್ತದೆ ಎಂದು ಹೇಳುತ್ತಾರೆ ಹಿರಿಯರು. ಆ ದೃಷ್ಟಿಯಲ್ಲಿ ಭಗವಂತನ ಸಹನಶೀಲತೆಯನ್ನು ಉಪಾಸನೆ ಮಾಡಬೇಕು.
ಭಾಗವತದ ಒಂದು ಪ್ರಸಂಗದಲ್ಲಿ ತೃತೀಯ ಸ್ಕಂದದಲ್ಲಿ ವ್ಯಾಖ್ಯಾನ ಮಾಡುವಾಗ ಸಹನೆ ಎಂಬುವ ಶಬ್ದವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಚಿಕ್ಕವರು ತಪ್ಪು ಮಾಡಿದಾಗ ಸಹನೆ ಮಾಡಿಕೊಳ್ಳುವುದು ಎಂದರೆ ಅವರಿಗೆ ಯೋಗ್ಯವಾದ ಅವಶ್ಯಕತೆ ಇದ್ದ ಶಿಕ್ಷೆಯನ್ನು ಕೊಡಬೇಕು. ಹಿತಮಿತವಾಗಿ ಕೊಡಬೇಕು. ಕೆಲವೊಮ್ಮೆ ಪ್ರೀತಿಯಿಂದ ಹೇಳಬೇಕು ಕೆಲವೊಮ್ಮೆ ಜೋರಾಗಿ ಹೇಳಬೇಕು, ಒಂದೆರಡು ಮಾತಿನಲ್ಲಿ ಬೈದು ಹೇಳೋದು, ದಾರಿಗೆ ತರುವುದಕ್ಕೆ ಎಷ್ಟು ಬೇಕು ಅಷ್ಟು ಗದರುವದರಲ್ಲಿ ತಪ್ಪಿಲ್ಲ ಎಂದು ಮಹಿಮಾನ್ವಿತರಾದ ಯಾದವಾರ್ಯರು ಒಂದು ವಾಖ್ಯಾನದಲ್ಲಿ ಹೇಳುತ್ತಾರೆ.
ನಾವೇ ತಪ್ಪು ಮಾಡಿದಾಗ ದೊಡ್ಡವರು ನಮ್ಮನ್ನು ಇದು ತರವಲ್ಲವೆಂದು ಸಹನೆಯಿಂದಲೇ ಹೇಳುತ್ತಾರೆ. ಆಗ ನಮ್ಮಲ್ಲಿ ಸಹನೆ ಇರೋದಿಲ್ಲ. ನನಗೆ ಹೇಳುವುದಕ್ಕೆ ನೀವ್ಯಾರು ಎಂಬ ಮಾತನ್ನು ನಾವು ಉನ್ಮಾದದಿಂದ ಎದುರು ಉತ್ತರ ನೀಡಿತ್ತೀವಲ್ಲಾ..! ಅದನ್ನು ಬಿಡಿ, ಎಂದು ಹೇಳುತ್ತಾರೆ ಯಾದವಾರ್ಯರು. ಅಂತಹ ಸಹನೆಶೀಲತೆ ಪ್ರತಿಯೊಬ್ಬರಿಗೂ ಇರಬೇಕು ಹಿರಿಯರು ಶಿಕ್ಷೆ ಕೊಟ್ಟಾಗ ಸಹಿಸಿಕೊಂಡು ತಿದ್ದಿಕೊಳ್ಳುವ ಸಹನಶೀಲತೆ ಕಿರಿಯರಲ್ಲಿ ಹಾಗೂ ಕಿರಿಯರು
ಕೆಲವೊಂದು ಸಂದರ್ಭದಲ್ಲಿ ತಪ್ಪನ್ನು ಮಾಡಿದಾಗ ಕೆಲವು ಸಂದರ್ಭದಲ್ಲಿ ತಿಳಿ ಹೇಳುವ ಸಹನಶೀಲತೆಯನ್ನು ಹಿರಿಯರು ರೂಡಿಸಿಕೊಳ್ಳಬೇಕು. ಇದೇ ದೊಡ್ಡ ಧರ್ಮ.