ಚಿತ್ರ: ಹೈಡ್ ಆ್ಯಂಡ್ ಸೀಕ್
ನಿರ್ದೇಶನ: ಪುನೀತ್ ನಾಗರಾಜು
ನಿರ್ಮಾಣ: ಸುನೇರಿ ಆರ್ಟ್ ಕ್ರಿಯೇಶನ್ಸ್
ತಾರಾಗಣ: ಅನೂಪ್ ರೇವಣ್ಣ, ಧನ್ಯಾಾ ರಾಮಕುಮಾರ್, ಬಲರಾಜವಾಡಿ, ಅರವಿಂದ ರಾವ್, ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ, ಮೈತ್ರಿ ಜಗ್ಗಿ ಮತ್ತಿತರರು.
ರೇಟಿಂಗ್ಸ್ 3
- ಜಿ.ಆರ್.ಬಿ
‘ಹೈಡ್ ಆ್ಯಂಡ್ ಸೀಕ್’ ಗೇಮ್ ಆಡಲು ಇಬ್ಬರು ಇರಲೇಬೇಕು ಎಂಬುದು ಆಟದ ನಿಯಮ. ಅದೇ ನಿಯಮದಂತೆ ಒಬ್ಬ ಕ್ರಿಮಿನಲ್ ಮತ್ತೊಬ್ಬ ಪೊಲೀಸ್ ‘ಹೈಡ್ ಆ್ಯಂಡ್ ಸೀಕ್’ ಗೇಮ್ ಆಡಿದರೆ, ಆ ಆಟ ಹೇಗಿರಬಹುದು? ಅದನ್ನೇ ಒಂದಷ್ಟು ಕುತೂಹಲಭರಿತವಾಗಿ ತೆರೆಮೇಲೆ ಹೇಳಿರುವ ಸಿನಿಮಾ ‘ಹೈಡ್ ಆ್ಯಂಡ್ ಸೀಕ್’.
ಶ್ರೀಮಂತ ಕುಟುಂಬದ ಇಬ್ಬರು ಹುಡುಗಿಯರನ್ನು ಕಿಡ್ನ್ಯಾಪರ್ ಒಬ್ಬ ತನ್ನ ಸಹಚರರ ಜೊತೆ ಸೇರಿ ಅಪಹರಿಸಿಕೊಂಡು ನಗರದ ಹೊರವಲಯಕ್ಕೆೆ ಕರೆದುಕೊಂಡು ಹೋಗುತ್ತಾನೆ. ಇಬ್ಬರು ಹುಡುಗಿಯರು ಅಪಹರಣವಾಗಿರುವ ವಿಷಯ ತಿಳಿಯುತ್ತಿದ್ದಂತೆ, ಪೊಲೀಸರು ಕಿಡ್ನ್ಯಾಪರ್‌ಗಳ ಬೆನ್ನು ಬೀಳುತ್ತಾಾರೆ. ಅಂತಿಮವಾಗಿ ಈ ಕಿಡ್ನ್ಯಾಪರ್‌ಗಳು ಪೊಲೀಸರಿಗೆ ಹೇಗೆಲ್ಲ ಚಳ್ಳೆೆ ಹಣ್ಣು ತಿನ್ನಿಸುತ್ತಾಾರೆ, ಕಿಡ್ನ್ಯಾಪರ್‌ಗಳು ಮತ್ತು ಪೊಲೀಸರ ಹಾವು-ಏಣಿ ಆಟ ಹೇಗಿರುತ್ತದೆ ಎಂಬುದೇ ‘ಹೈಡ್ ಆ್ಯಂಡ್ ಸೀಕ್’ ಸಿನಿಮಾದ ಕಥೆಯ ಒಂದು ಎಳೆ. ಅಂತಿಮವಾಗಿ ಈ ‘ಹೈಡ್ ಆ್ಯಂಡ್ ಸೀಕ್’ ಗೇಮ್‌ನಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಎಂಬುದು ಸಿನಿಮಾದ ಕ್ಲೈಮ್ಯಾಕ್ಸ್ ವೇಳೆಗೆ ಗೊತ್ತಾಾಗುತ್ತದೆ.
ಇನ್ನು ‘ಹೈಡ್ ಆ್ಯಂಡ್ ಸೀಕ್’ ಒಂದು ಅಪ್ಪಟ ಸಸ್ಪೆೆನ್ಸ್ ಕಂ ಥ್ರಿಲ್ಲರ್ ಶೈಲಿಯ ಸಿನಿಮಾ. ಇಬ್ಬರು ಹುಡುಗಿಯರ ಅಪಹರಣ, ಅದರ ಹಿಂದಿನ ಮಾಫಿಯಾ, ಹೆತ್ತವರ ವೇದನೆ, ಪೊಲೀಸರ ಹುಡುಕಾಟ ಎಲ್ಲವನ್ನೂ ಒಂದಷ್ಟು ಕುತೂಹಲಭರಿತವಾಗಿ ಪ್ರೇಕ್ಷಕರ ಮುಂದಿಡುವ ಪ್ರಯತ್ನವನ್ನು ಸಿನಿಮಾದಲ್ಲಿ ಮಾಡಿದ್ದಾಾರೆ ನಿರ್ದೇಶಕ ಪುನೀತ್ ನಾಗರಾಜು. ಆದರೆ ಆ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದು ಗೊತ್ತಾಗಬೇಕಾದರೆ, ‘ಹೈಡ್ ಆ್ಯಂಡ್ ಸೀಕ್’ ಸಿನಿಮಾವನ್ನು ಕೊನೆಯವರೆಗೂ ಸಾವದಾನ ಚಿತ್ತರಾಗಿ ನೋಡುವ ತಾಳ್ಮೆೆಯಿರಬೇಕು.
ಉಳಿದಂತೆ ಸಿನಿಮಾದ ನಾಯಕ ಅನೂಪ್ ರೇವಣ್ಣ ಸಿನಿಮಾದಲ್ಲಿ ತುಂಬ ಕಡಿಮೆ ಮಾತಿನ, ಸೀರಿಯಸ್ ಲುಕ್‌ನ ಕಿಡ್ನ್ಯಾಪರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಾರೆ. ನಾಯಕಿ ಧನ್ಯಾಾ ರಾಮಕುಮಾರ್ ಅಪಹರಣಕ್ಕೆೆ ಒಳಗಾಗುವ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾಾರೆ. ಉಳಿದಂತೆ ಕೃಷ್ಣ ಹೆಬ್ಬಾಳೆ, ರಾಜೇಶ್ ನಟರಂಗ, ಬಲರಾಜವಾಡಿ, ಅರವಿಂದ ರಾವ್, ಮೈತ್ರಿ ಜಗ್ಗಿ ಮತ್ತಿತರರು ಸಿನಿಮಾದಲ್ಲಿ ತುಂಬ ಗಂಭೀರ ಪಾತ್ರಗಳಲ್ಲಿ ಕಾಣುತ್ತಾಾರೆ. ಸಿನಿಮಾದ ಕ್ಯಾಮರಾ, ಹಿನ್ನೆೆಲೆ ಸಂಗೀತ ತಾಂತ್ರಿಕವಾಗಿ ಗಮನ ಸೆಳೆಯುತ್ತದೆ. ಸಂಕಲನ, ಕಲರಿಂಗ್, ಹಾಡುಗಳು ಇನ್ನಷ್ಟು ಗುಣಮಟ್ಟದಲ್ಲಿದ್ದರೆ, ‘ಹೈಡ್ ಆ್ಯಂಡ್ ಸೀಕ್’ ತೆರೆಮೇಲೆ ಇನ್ನೂ ಹೆಚ್ಚು ಗಮನ ಸೆಳೆಯುವ ಸಾಧ್ಯತೆಗಳಿದ್ದವು.