ಗೋಕರ್ಣ: ಸರ್ವಪಿತೃ ಅಮಾವಾಸ್ಯೆಯ ದಿನವಾದ ರವಿವಾರ ಪುರಾಣ ಪ್ರಸಿದ್ಧ ಕ್ಷೇತ್ರದಕ್ಕೆ ಜನರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಪಿತೃ ಪಕ್ಷದ ಕೊನೆಯ ದಿನವಾದ್ದರಿಂದ ಮೃತರಿಗೆ ಪಿಂಡ ಪ್ರಧಾನ, ತರ್ಪಣ, ಶ್ರಾದ್ದ ಮುಂತಾದ ಅಪಾರ ಕಾರ್ಯವನ್ನು ಇಲ್ಲಿ ಪುರೋಹಿತರ ಮುಖೇನ ಕೋಟಿತೀರ್ಥ ಕಟ್ಟೆ, ಮುಖ್ಯ ಕಡಲತೀರ ಸಾಗುವ ಮಾರ್ಗದಲ್ಲಿರುವ ಪಿತೃಸ್ಥಾಲೇಶ್ವರ, ರುದ್ರಪಾದಗಳಲ್ಲಿ ನೇರವೇರಿಸಿದ್ದು, ಈ ಭಾಗದಲ್ಲಿ ಜನರ ಜಾತ್ರೆಯೇ ನೆರದಿತ್ತು.
ಮುಖ್ಯ ಕಡಲತೀರದಲ್ಲಿ ಸಮುದ್ರ ಸ್ನಾನ ಮಾಡುವುದು, ತಪರ್ಣ ನೀಡುವುದು ನಡೆಯುತ್ತಿದ್ದರೆ. ಪುರೋಹಿತರ ಮನೆಯಲ್ಲಿಯೂ ವಿವಿಧ ಬ್ರಾಹ್ಮಣ ಭೋಜನ, ದಾನ, ಮಾನ ಕಾರ್ಯಕ್ರಮಗಳ ನಡೆಯಿತು.
ಕಳೆದ ಹದಿನೈದು ದಿನಗಳಿಂದ ರಾಜ್ಯದ ವಿವಿಧೆಡೆ ಮತ್ತು ಹೊರ ರಾಜ್ಯದಿಂದ ಜನರು ಆಗಮಿಸಿ ಮೃತರ ಆತ್ಮಕ್ಕೆ ಶಾಂತಿಕೋರಿ ಅಪರಕಾರ್ಯ ಕೈಗೊಂಡಿದ್ದಾರೆ. ಈ ಮಾಸದಲ್ಲಿ ವರ್ಷದಲ್ಲೆ ಎಂದೂ ಅಗದಷ್ಟು ಶ್ರಾದ್ದಗಳು ನಡೆಯಿತು. ವರ್ಷದಲ್ಲಿ ಒಮ್ಮೆಯಾದರೂ ಹಿರಿಯನ್ನು ನೆನಪಿಸಿಕೊಳ್ಳುವುದು, ಹಿಂದಿನ ತಲೆಮಾರಿನವರಿನ ಯಾವುದೋ ಕಾರಣಕ್ಕೆ ಕುಟುಂಬದಲ್ಲಿನ ಯಾವುದೂ ಪಿತೃಗಳಿಗೆ ಪಿಂಡ ಪ್ರಧಾನ ತರ್ಪಣ ನೀಡುವುದು ಬಿಟ್ಟು ಹೋಗಿದ್ದರೆ ಈ ಮಾಸದಲ್ಲಿ ಮಹಾಲಯ ಶ್ರಾದ್ಧದ ಮೂಲಕ ಪೂರ್ಣಗೊಳಿಸಲಾಗುತ್ತದೆ. ಸಿದ್ದಿ ಮುಕ್ತಿ ಕ್ಷೇತ್ರವಾದ ಗೋಕರ್ಣದಲ್ಲಿ ಈ ಕಾರ್ಯ ಮಾಡುವುದರಿಂದ ಅಧಿಕ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.