ಸರ್ಕಾರಿ ಕಟ್ಟಡಗಳ ನಿರ್ಲಕ್ಷ್ಯ

Advertisement

ಕುಷ್ಟಗಿ: ಸರ್ಕಾರಿ ಕಟ್ಟಡಗಳು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಅಧಿಕಾರಿಗಳು ಮಾತ್ರ ಕಟ್ಟಡಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿರುವುದರಿಂದ ಹಾಳಾಗುತ್ತಿವೆ ಇದರ ಬಗ್ಗೆ ಅಧಿಕಾರಿಗಳು ಗಮನಸಬೇಕಾಗುತ್ತದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಮಾತನಾಡಿದ ಅವರು, ಸರಕಾರಿ ಕಟ್ಟಡಗಳು ಗಟ್ಟಿಮುಟ್ಟಾಗಿರುತ್ತವೆ ಆದರೆ ಅಧಿಕಾರಿಗಳು ಮಾತ್ರ ಕಟ್ಟಡ ವೀಕ್ಷಣೆ ಮಾಡಲು ಬಂದ ಸಂದರ್ಭದಲ್ಲಿ. ಸಣ್ಣಪುಟ್ಟ ರಿಪೇರಿ ಇದ್ದರೆ. ಅದನ್ನು ಮಾಡಿಸುವ ಬದಲು ಸುಸ್ಥಿತಿಯಲ್ಲಿರುವಂತಹ ಕಟ್ಟಡವನ್ನು ನೆಲಸಮಗೊಳಿಸಿ ಹೊಸದಾಗಿ ನಿರ್ಮಾಣ ಮಾಡುವಂತೆ ಅಧಿಕಾರಿಗಳು ಕಟ್ಟಡದ ಎಸ್ಟಿಮೆಂಟ್ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಕಳಿಸುತ್ತಾರೆ ಸರ್ಕಾರದವರು ಸಹ ಬೇಕಾದಷ್ಟು ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಡಿಗ್ರಿ ಕಾಲೇಜಿಗೆ ಸುಣ್ಣ -ಬಣ್ಣ ಇಲ್ಲ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಡಿಗಲ್ಲು ಹಾಕಿದ್ದು ಮಾಜಿ ಶಾಸಕ ಹನುಮಗೌಡ ಪಾಟೀಲ್ ಅವರು ತದನಂತರ ಕಾಲೇಜು ಪ್ರಾರಂಭವಾಗಿದ್ದು ಮಾಜಿ ಶಾಸಕ ಕೆ ಶರಣಪ್ಪ ಅವರ ಕಾಲದಲ್ಲಿ ಅಂದಿನಿಂದ ಇಲ್ಲಿವರೆಗೂ ಸಹ ಯಾವುದೇ ರೀತಿ ಕಾಲೇಜಿಗೆ ಸುಣ್ಣ ಬಣ್ಣ ಆಗಿರುವುದಿಲ್ಲ.