ಸರಣಿ ಅಪಘಾತ: ಒಂದೇ ಕುಟುಂಬದ ಮೂವರು ಸಾವು

Advertisement

ವಿಜಯಪುರ : ಸರ್ಕಾರಿ ಬಸ್ ಹಾಗೂ ಎರಡು ಕಾರುಗಳ‌ ನಡುವೆ ಸರಣಿ ಅಪಘಾತ ಸಂಭವಿಸಿದ‌ ಪರಿಣಾಮ ಕಲಬುರ್ಗಿ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟ ‌ಧಾರುಣ ಘಟನೆ ಕೊಲ್ಹಾರ ಸಮೀಪದ ಕುಬಕಡ್ಡಿ ಕ್ರಾಸ್ ಬಳಿ ಸಂಭವಿಸಿದೆ.
ಕಾರಿನಲ್ಲಿದ್ದ ಏಳು ಜನರ ಪೈಕಿ ಓರ್ವ‌ ಮಹಿಳೆ, ಮಗು‌ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಇನ್ನೋರ್ವ ‌ಮಹಿಳೆ ಆಸ್ಪತ್ರೆಯಲ್ಲಿ‌ ಚಿಕಿತ್ಸೆ‌ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತರನ್ನು ಸುನಂದಾ‌‌ ಕಲಶೆಟ್ಟಿ, ಮೂರು ತಿಂಗಳ ಹಸುಳೆ‌ ಸುಮನ್, ಶರಣಮ್ಮ ಕಲಶೆಟ್ಟಿ ಎಂದು‌‌ ಗುರುತಿಸಲಾಗಿದೆ.
ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.