ಸಮುದ್ರದ ಆಳದಲ್ಲಿಯೂ ಗಂಧದಗುಡಿ ಪ್ರಚಾರ !

Advertisement

ಭಟ್ಕಳ: ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮರ್ ಅವರ ಕನಸಿನ ಕೂಸಾದ ಗಂಧದಗುಡಿ ಚಿತ್ರದ ಪ್ರಚಾರ ಟ್ರೇಲರ್ ಭಾರೀ ಜನ ಮೆಚ್ಚುಗೆ ಪಡೆಯುತ್ತಿದೆ. ಎಲ್ಲಾ ಕಡೆಗಳಲ್ಲಿಯೂ ಕೂಡಾ ಜನರು ಟ್ರೇಲರ್ ನೋಡುವುದಕ್ಕೇ ಮುಗಿ ಬೀಳುತ್ತಿದ್ದು ವಿವಿಧ ರೀತಿಯಲ್ಲಿ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ.
ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ತಂಡವೊಂದು ನೇತ್ರಾಣಿ ಸಮೀಪ ನೇತ್ರಾಣಿ ಅಡ್ವಂಚರ‍್ಸ್ ಅವರ ಮೂಲಕ ಸ್ಕೂಬಾ ಡೈವಿಂಗ್‌ಗೆ ತೆರಳಿದ್ದ ವೇಳೆಯಲ್ಲಿ ಗಂಧದಗುಡಿ ಪೋಸ್ಟರ್ ಹಿಡಿದು ಪ್ರಚಾರ ಮಾಡುವ ಮೂಲಕ ನೆಲ, ವಾಯ, ಜಲದಲ್ಲಿಯೂ ಕೂಡಾ ಪ್ರಚಾರ ಮಾಡಿದಂತಾಗಿದೆ.
ಒಟ್ಟಾರೆ ಜನರು ಗಂಧದಗುಡಿಯನ್ನು ಮೆಚ್ಚಿಕೊಂಡಿದ್ದು ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸುವುದಕ್ಕೆ ತುದಿಗಾಲ ಮೇಲೆ ನಿಂತಿದ್ದಾರೆ. ಇದು ಬೆಂಗಳೂರಿನ ತಂಡ ಸ್ಕೂಬಾ ಡೈವಿಂಗ್‌ಗೆ ಬರುವಾಗಲೇ ತಯಾರು ಮಾಡಿಕೊಂಡು ಬಂದಿದ್ದ ಪೋಸ್ಟರ್ ಆಗಿದ್ದು ಕೇವಲ ಗಂಧದಗುಡಿ ಪ್ರಚಾರ ಮಾತ್ರವಲ್ಲ ತಮ್ಮ ಪರಿಸರ ಪ್ರೇಮವನ್ನು ಕೂಡಾ ಅವರು ಮೆರೆದಿದ್ದಾರೆ.