ಸಮರ್ಪಕ ಬಸ್ ವ್ಯವಸ್ಥೆಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಇಳಕಲ್‌
Advertisement

ಇಳಕಲ್:‌ ತಾಲೂಕಿನ ಮರಟಗೇರಿ ಗ್ರಾಮದಿಂದ ಮುಂಜಾನೆ ೯ ಗಂಟೆಗೆ ಕಂದಗಲ್ಲ ಗ್ರಾಮದ ಮಾರ್ಗವಾಗಿ ಇಳಕಲ್‌ಗೆ ಬಸ್ ಓಡಿಸಬೇಕು ಎಂದು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸೋಮವಾರದಂದು ಪ್ರತಿಭಟನೆಯನ್ನು ನಡೆಸಿದರು . ಮರಟಗೇರಿ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ಮತ್ತು ಪಾಲಕರು ಇಳಕಲ್ ಬಸ್ ನಿಲ್ದಾಣಕ್ಕೆ ಆಗಮಿಸಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಮೊದಲಿಗೆ 9 ಗಂಟೆಗೆ ಇದ್ದ ಬಸ್ ವೇಳೆಯನ್ನು ಬದಲಿಸಿ ಈಗ 10 ಗಂಟೆಗೆ ಮಾಡಿರುವುದರಿಂದ ವಿದ್ಯಾರ್ಥಿಗಳು ಶಾಲೆಯ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ ಆದ್ದರಿಂದ ಅದನ್ನು ಮೊದಲಿನಂತೆ 9 ಗಂಟೆಗೆ ಮಾಡಬೇಕೆ ಸಂಜೆ 5 ಗಂಟೆಗೆ ಇಳಕಲ್ ದಿಂದ ಕಂದಗಲ್ಲ ಗ್ರಾಮದ ಮಾರ್ಗವಾಗಿ ಮರಟಗೇರಿಗೆ ಬಸ್ ಬಿಡಿ ಎಂದು ಆಗ್ರಹಿಸಿದರು.