ಬೆಳಗಾವಿ: ಶಾಸಕ ಸತೀಶ ಜಾರಕಿಹೊಳಿ ಭಾಷಣ ಮಾಡುತ್ತಿದ್ದ ವೇಳೆ ಮರಾಠಾ ಸಮುದಾಯದ ಕೆಲವರು ಅಡ್ಡಿಪಡಿಸಿದ ಘಟನೆ ಇಲ್ಲಿನ ಕೊಂಡಸಕೊಪ್ಪ ಪ್ರತಿಭಟನಾ ಸ್ಥಳದಲ್ಲಿ ನಡೆಯಿತು.
ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸತೀಶ ಜಾರಕಿಹೊಳಿ, ಕೇವಲ ನಾಲ್ಕು ಜನರು ವಿರೋಧ ಮಾಡಿದ್ದಾರೆ. ಕೆಲವರು ರಾಜಕೀಯವಾಗಿ ಈ ರೀತಿ ಮಾಡುತ್ತಾರೆ. ಜಿಂದಾಬಾದ್ ಅಂತಾ ಹೇಳಿದ್ರೆ ಮಾತ್ರ ಅವನು ಲೀಡರ್ ಆಗುತ್ತಾನೆ. ರಾಜಕೀಯ ಜೀವನದಲ್ಲಿ ಇದೇನು ಹೊಸದಲ್ಲ. ಇದು ಸಮುದಾಯದ ಪ್ರತಿಭಟನೆ. ನಿಪ್ಪಾಣಿ ಸಭೆ ಬೇರೆ, ಈ ಸಭೆ ಬೇರೆ. ಅತೀ ಸೂಕ್ಷ ವಿಚಾರವಿದು. ಇದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕು ಎಂದರಲ್ಲದೇ, ಮರಾಠಾ ಸಮುದಾಯದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಪಕ್ಷದಿಂದ ಸದನದಲ್ಲಿ ಚರ್ಚೆ ಮಾಡಲಾಗುವುದು ಎಂದರು.