ಬಾಗಲಕೋಟೆ: ಬೀಳಗಿ ವಿಧಾನಸಭಾ ಕ್ಷೇತ್ರದಿಂದ ಸಚಿವ ಮುರುಗೇಶ ನಿರಾಣಿ ಹಾಗೂ ತೇರದಾಳ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸಿದ್ದು ಸವದಿ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಪಕ್ಷದ ಮುಖಂಡರೊಂದಿಗೆ ತೆರಳಿ ಸಾಂಕೇತಿಕವಾಗಿ ಇಂದು ಗುರುವಾರ ಏ.೧೩ರ ಬೆಳಗ್ಗೆ ಇಬ್ಬರೂ ನಾಮಪತ್ರ ಸಲ್ಲಿಸುವರು.
ಸಿದ್ದು ಸವದಿ ಅವರು ರಬಕವಿ-ಬನಹಟ್ಟಿ ತಹಶೀಲ್ದಾರ್ ಗೆ ಹಾಗೂ ಮುರುಗೇಶ ನಿರಾಣಿ ಅವರು ಬೀಳಗಿ ತಹಶೀಲ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವರು.