ಆಧುನಿಕತೆ ಬೆಳೆದಂತೆಲ್ಲಾ ನಡೆ ವೈಚಾರಿಕತೆಗಳು ಬದಲಾಗುತ್ತವೆಯೇನೋ ನಿಜ. ಆದರೆ ಮೂಲ ಸಂಸ್ಕಾರದ ಮನೋಭೂಮಿಕೆಯನ್ನು ಅಷ್ಟು ಸಲೀಲವಾಗಿ ಬಿಡಿಸಿಕೊಳ್ಳಲು ಆಗದ ಮಾತು.
ಹಳೆಯದು ಎಂದು ನಿರ್ಲಕ್ಷಿಸಬೇಕಿಲ್ಲ. ಸಾಕಷ್ಟು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿಯೇ ಧರ್ಮದ ಅನೇಕ ವಿಚಾರಗಳನ್ನು ಹಿಂದಿನ ವಾಙ್ಮಯಗಳಲ್ಲಿ ಬಿಂಬಿಸಲಾಗಿದೆ.
ಒಂದು ಸಂಸ್ಕೃತಿ ಛಾಯೆ ಮತ್ತೊಂದು ಸಂಸ್ಕೃತಿಯ ಮೇಲೆ ಬಿದ್ದಾಗ. ಅಲ್ಪಸ್ವಲ್ಪವಲ್ಲದೆ ಅಮೂಲಾಗ್ರ ಬದಲಾವಣೆಯಾಗಬದೇನೋ? ಹಾಗೆಂದ ಮಾತ್ರಕ್ಕೆ ಬದಲಾವಣೆಯ ಹಿನ್ನೆಲೆಯಲ್ಲಿ ಒಂದು ಸಂಸ್ಕೃತಿ ಸಂಸ್ಕಾರ ಬೆಳೆದು ಬಂದ ರೀತಿಯನ್ನು ಅವಲೋಕಿಸುವುದು ಒಳ್ಳೆಯದು.
ಇಂದು ಗಂಡು ಹೆಣ್ಣು ಸಮಾನ ಎಂದು ಹೇಳುತ್ತೇವೆ. ಅದು ನಿಜ. ಆದರೆ ದಾಂಪತ್ಯದಲ್ಲಿ ಹೆಣ್ಣುಮಕ್ಕಳ ಈ ಮುಂದಿನ ನಡೆಗಳು ಇಷ್ಟವಾಗುವದಿಲ್ಲವೆಂದು ದ್ರೌಪದಿಯು ಸತ್ಯಭಾಮೆಗೆ ಹೇಳುತ್ತಾಳೆ.
ಗಂಡನು ಮಾತನಾಡಿಸಿದಾಗ ತಿರಸ್ಕಾರ ಮಾಡಿದರೆ ಗಂಡನಿಗೆ ಅದು ಇಷ್ಟ್ಟವಾಗುವುದಿಲ್ಲ. ಅಥವಾ ವಿನಾಕಾರಣ ಯಾವುದೇ ಪ್ರಯೋಜನವಿಲ್ಲದೆ ಮತ್ತೊಬ್ಬ ಹೆಂಗಸಿನ ಜೊತೆಯಲ್ಲಿ ಹೆಂಡತಿಯು ಮಾತನಾಡುತ್ತಾ ಕುಳಿತುಕೊಂಡರೆ ಗಂಡನಿಗೆ ಅದು ಇಷ್ಟ್ಟವಾಗುವುದಿಲ್ಲ. ವಿನಾ ಕಾರಣ ಹಾಸ್ಯ ಮಾಡುತ್ತಲೇ ಇರುವುದು. ನಗುತ್ತಲೇ ಇರುವುದು.
ಸುಮ್ಮನೆ ಬಾಗಿಲಿನಲ್ಲಿ ನಿಂತು ಕಾಲ ಕಳೆಯುವುದು, ಮನೆಯಲ್ಲಿ ಕಸವನ್ನು ತೆಗೆಯದೆ ಇರುವುದು, ಕಸದ ಮಧ್ಯದಲ್ಲೇ ಕುಳಿತುಕೊಳ್ಳುವುದು. ಸ್ವಚ್ಛವಲ್ಲದ ಜಾಗವನ್ನು ಎಂದೂ ಸ್ವಚ್ಛಗೊಳಿಸದೇ ಇರುವುದು ಇವೆಲ್ಲವೂ ಗಂಡನಿಗೆ ಇಷ್ಟ್ಟವಾಗುವುದಿಲ್ಲ. ಇಂತಹ ದುರ್ಗುಣವುಳ್ಳ ಹೆಂಡತಿಯಿಂದ ಗಂಡನು ದೂರವಿರಲು ಪ್ರಯತ್ನಿಸುತ್ತಾನೆ. ಸಂಸಾರವು ನಾಶವಾಗುತ್ತದೆ.
ಸಂಸಾರ ಗೆಲ್ಲಲು ದ್ರೌಪದಿ ಹೇಳಿದ ಗುಟ್ಟು. ಸತ್ಯಭಾಮೆಯೇ ಸಂಸಾರವನ್ನು ಗೆಲ್ಲುವುದು ಬಹಳ ಸುಲಭ. ನಾನು ಯಾವಾಗಲೂ ಸತ್ಯವನ್ನೇ ಹೇಳುತ್ತೇನೆ. ಪಾಪಕರ್ಮಗಳನ್ನು ಪರಿತ್ಯಾಗ ಮಾಡುತ್ತೇನೆ. ಬೇರೆಯವರ ಜೊತೆಯಲ್ಲಿ ಗಂಟೆಗಟ್ಟಲೆ ಮಾತನಾಡುವುದಿಲ್ಲ. ಸಣ್ಣಪುಟ್ಟ ಕಾರಣಗಳಿಂದ ಮನಸ್ಸಿನ ಸಂತೋಷವನ್ನು ನಾನು ಕಳೆದುಕೊಳ್ಳುವುದಿಲ್ಲ. ಇದ್ದಿದ್ದರಲ್ಲಿ ತೃಪ್ತಿಯನ್ನು ಅನುಭವಿಸುತ್ತೇನೆ. ಮತ್ತೊಬ್ಬರ ಮನೆಯ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಯಾವಾಗಲೂ ತಿನ್ನುತ್ತಲೇ ಇರುವುದಿಲ್ಲ. ತುಂಬಾ ಸಿಟ್ಟು ಮಾಡುವುದು, ತುಂಬಾ ಜಗಳ ಮಾಡುವುದು ಇವುಗಳನ್ನು ಯಾವ ಸ್ತ್ರೀಯು ಬಿಡುತ್ತಾಳೋ ಅವಳು ಸಂಸಾರವನ್ನು ಸುಲಭವಾಗಿ ಗೆಲ್ಲುತ್ತಾಳೆ. ಇದುವೇ ಸಂಸಾರ ಗೆಲ್ಲುವ ಗುಟ್ಟು ಎಂದು ಹೇಳುತ್ತಾಳೆ.