ಘಟಪ್ರಭಾ: ಸತೀಶ ಜಾರಕಿಹೊಳಿಯವರ ಹೇಳಿಕೆ ಬೆಂಬಲಿಸಿ ಘಟಪ್ರಭಾದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಆಗಮಿಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಕಾರನ್ನು ಪ್ರತಿಭಟನಾಕಾರರು ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಘಟನೆ ಇಂದು ಸಂಜೆ ಘಟಪ್ರಭಾ ಮೃತ್ಯುಂಜಯ ಸರ್ಕಲ್‌ನಲ್ಲಿ ನಡೆದಿದೆ.
ಸಂಸದ ಈರಣ್ಣ ಕಡಾಡಿ ಘಟಪ್ರಭಾದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ೨ಎ ಮೀಸಲಾತಿ ಹೋರಾಟದ ಕಾರ್ಯಕ್ರಮ ಮುಗಿಸಿ ತಮ್ಮ ಊರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಘಟಪ್ರಭಾ ಸರ್ಕಲ್‌ನಲ್ಲಿ ಸತೀಶ ಜಾರಕಿಹೊಳಿ 4 ದಿನದ ಹಿಂದೆ ನೀಡಿದ್ದ ಹೇಳಿಕೆ ಬೆಂಬಲಿಸಿ ಪ್ರತಿಭಟನೆ ಮಾಡುತ್ತಿದ್ದ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಸಂಸದರ ಕಾರನ್ನು ಅಡ್ಡಗಟ್ಟಿ ಕಾರಿನ ಮೇಲೆ ಗುದ್ದಿ ಹಲ್ಲೆಗೆ ಯತ್ನಿಸಿದರು. ಒಂದು ಹಂತದಲ್ಲಿ ಪರಿಸ್ಥಿತಿ ಸಂಪೂರ್ಣ ಕೈ ಮೀರುವ ಹಂತಕ್ಕೆ ತಲುಪಿದಾಗ ಪೊಲೀಸರೇ ಮುಂದೆ ನಿಂತು ಪಾರು ಮಾಡಿದರು.