ಈ ಕೆಳಕಂಡ ವಾಕ್ಯಗಳನ್ನು ಯಾರು ಯಾರಿಗೆ? ಯಾವಾಗ? ಹೇಗೆ ಹೇಳಿದರು? ಎಂದು ನೀಟಾಗಿ ಬರೆಯಬೇಕು. ಮೊದಲು ನಾವು ಆಪ್ಶನ್‌ಗಳನ್ನು ಕೊಡಬೇಕು ಎಂದು ಮಾಡಿದ್ದೆವು. ಆದರೆ ಸಮಿತಿಯವರು, ಬೇಡ ಬೇಡ…ಈಗಾಗಲೇ ಎಲ್ಲ ಕಡೆ ಇವುಗಳ ಬಗ್ಗೆ ಗೊತ್ತಿದೆ. ಈಗಿನವರು ಭಯಂಕರ ಇಂಟಲಿಜೆಂಟು ಹಾಗಾಗಿ ಹೇಳುತ್ತಾರೆ ಎಂದು ವಾದ ಮಾಡಿದ್ದರಿಂದ ನಾವು ಯಾವುದೇ ಆಯ್ಕೆಗಳಿಲ್ಲದೇ ಕೊಡುತ್ತಿದ್ದೇವೆ. ಇನ್ಯಾಕೆ ತಡಮಾಡುತ್ತೀರಿ…ಬೇಗ..ಬೇಗ ಬರೆಯಿರಿ ಬಹುಮಾನ ಪಡೆಯಿರಿ. ಈ ಸ್ಪರ್ಧೆ ಇಲ್ಲಿಯ ಮಟ್ಟದ್ದಾಗಿದೆ. ಇದರಲ್ಲಿ ಸ್ಥಾನ ಪಡೆದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟಕ್ಕೂ ತಮ್ಮನ್ನು ಕಳುಹಿಸಿಕೊಡಲಾಗುವುದು. ಮರೆಯಬೇಡಿ..ಮರೆತು ನಿರಾಶೆರಾಗಬೇಡಿ…
- ನಾನವನಲ್ಲ…ನಾನವನಲ್ಲ…ನನಗೆ ಟಿಕೆಟ್ ಇನ್ನೂ ಸಿಕ್ಕಿಲ್ಲ…ಸಿಕ್ಕರೂ ನನಗೆ ಅಲ್ಲಿಗೆ ಬರುವುದಕ್ಕೆ ಮನಸಿಲ್ಲ…
- ಅವನೇನೋ ಅಲ್ಲಿಗೆ ಹೋಗಿಬಿಟ್ಟ….ಹಿಡಿದರಲ್ಲ ನನಜುಟ್ಟ…ನಾನೇನು ಮಾಡಲಿ? ನಾನೇನು ಮಾಡಲಿ?
- ಇದನ್ನೆಲ್ಲ ಮಾಡಿದ್ದು ಕಾಯಕ…ನಾಯಕ…ಮಹಾನಾಯಕ.. ಹೋದವರಿಗೆಲ್ಲ ಅಂತಾನ ಮಕಮಕ
- ಓಹೋ….ಇಡ್ಕಂಡೋದ್ರಾ? ಇಡಕಂಡೋದ್ರಾ…ಅಯ್ಯೋ ಪಾಪ…ನಂಗೆ ಗೊತ್ತೇ ಇಲ್ವಲ್ರೀ…ಯಾವಗಂತೆ?
- ಇನ್ನೂ ಏನಿಲ್ಲ ಎಂತಿಲ್ಲ… ಅವನು ಅಲ್ಲಿ ಕುಂತಿಲ್ಲ…ಇಲ್ಲಿ ನಿಂತಿಲ್ಲ…ಪಿಕ್ಚರ್ ಅಭಿ ಬಾಕೀ ಹೈ…
- ಹೋಗಲಿ…ಬಿಡಲಿ…ನೋಡಲಿ..ಕಾಣಲಿ…ನಗಲಿ, ಅಳಲಿ, ಸುಮ್ಮನರಲಿ ನಾ ಹೊರಟೆ ರಾಯಬರೇಲಿ
- ಅವನು ಇವನಿಗೆ ಕೊಟ್ಟ, ಇವನು ಅವನಿಗೆ ಕೊಟ್ಟ…ಇಸಕೊಂಡವ ಈರಭದ್ರ…ಕೊಟ್ಟವ..ಕೋತಿ ತಿಮ್ಮ
- ನೋಡು ಗುರು ನೀ ಏನರ ಮಾಡು…ಇಲ್ಲಾದರೆ ನೋಡು…ಹಿಡಿ ಅವರ ಜಾಡು…
- ನೀನಲ್ಲ ನೀನಲ್ಲ…ಯಾವುದರ ಮಾಲಿಕ ನೀನಲ್ಲ…ಇದನ್ನು ಅರ್ಥ ಮಾಡಿಕೋ ಕರಿಮಲ್ಲ…
- ವೇಟ್….ವೇಟ್ ಜೂನ್ ನಾಲ್ಕರವರೆಗೆ ವೇಟ್…ಇಲ್ಲದಿದ್ದರೆ ನೀನು ಪಾಟ್…