ಸಂಚಾರ ನಿಯಮ‌ ಉಲ್ಲಂಘನೆ: ನೋಟಿಸ್​ ಜೊತೆಗೆ ಕ್ಯೂಆರ್​​ಕೋಡ್ ಮನೆಗೆ ಬರಲಿದೆ

Advertisement

ಬೆಂಗಳೂರು: ದಂಡದ ನೋಟಿಸ್ ಜೊತೆಗೆ ಕ್ಯೂ ಆರ್ ಕೊಡ್ ಕೂಡ ಮನೆ ಬಾಗಲಿಗೆ ಬರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ನಿಯಮಗಳನ್ನು ಜಾರಿಗೊಳಿಸುವ ಮುಖಾಂತರ ತಮ್ಮ ಕರ್ತವ್ಯವನ್ನು ಇನ್ನಷ್ಟು ಚುರುಕುಗೊಳಿಸುತ್ತಿದ್ದಾರೆ! 01/03/2024 ರಿಂದ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಳುಹಿಸಲಾದ ನೋಟಿಸ್‌ ನ ಕುರಿತು ವಿವರವಾದ ಮಾಹಿತಿಯನ್ನು ಕ್ಯೂ-ಆರ್‌ ಒಳಗೊಂಡಿರುತ್ತದೆ. ಜವಾಬ್ದಾರಿಯಿಂದ ವಾಹನವನ್ನು ಚಲಾಯಿಸೋಣ ಎಂದಿದ್ದಾರೆ.
ದಂಡದ ನೋಟಿಸ್ ಜೊತೆಗೆ ಕ್ಯೂ ಆರ್ ಕೊಡ್ ಕೂಡ ಮನೆ ಬಾಗಲಿಗೆ ಬರಲಿದೆ. ಈ ಕ್ಯೂಆರ್ ಕೋಡ್​ ಅನ್ನು ಸ್ಕ್ಯಾನ್ ಮಾಡುತಿದ್ದಂತೆ ನೀವು ಎಷ್ಟು ಬಾರಿ, ಎಲ್ಲೆಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂಬುವುದು ಗೊತ್ತಾಗಲಿದೆ. ನೀವು ಕ್ಯೂಆರ್​ ಕೋಡ್​ ಸ್ಕ್ಯಾನ್​ ಮಾಡುತ್ತಿದ್ದಂತೆ ನಿಯಮ ಉಲ್ಲಂಘನೆಯ ಫೋಟೋ ನಿಮ್ಮ ಮೊಬೈಲ್​​ನಲ್ಲಿ ಕಾಣಲಿದೆ. ಜೊತೆಗೆ ದಂಡ ಪಾವತಿಯ ಲಿಂಕ್​ ಸಹ ನಿಮ್ಮ ಮೊಬೈಲ್​ಗೆ ಬರಲಿದೆ. ನಿಯಮ ಉಲ್ಲಂಘನೆಯ ಫೋಟೊ ಕಂಡ ಬಳಿಕವೂ ದೂರು ಇದ್ದಲ್ಲಿ ನೀವು ಸಂಚಾರಿ ಪೊಲೀಸ್​ ಇಲಾಖೆಯ ವೆಬ್​ಸೈಟ್​ಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ದಂಡ ಪಾವತಿಸಲು ಆನ್‌ಲೈನ್ ಮೂಲಕ ಲಿಂಕ್ ಕಲ್ಪಿಸಲಾಗಿದೆ. ೨೦೨೧ ರ ನಂತರ ಉಲ್ಲಂಘಿಸಿದ ವಿಡಿಯೋ ಅಥವಾ ಫೋಟೊ ಲಭ್ಯವಿರಲಿವೆ.