ಸಂಕಷ್ಟದಿಂದ ಪಾರಾಗಲು ದರ್ಶನ್ ಬಾವನಿಂದ ವಿಶೇಷ ಪೂಜೆ

Advertisement

ಕಾರವಾರ: ನಟ ದರ್ಶನ್ ಒಳಿತಿಗಾಗಿ ಸಹೋದರಿ ಪತಿ ಕಾರವಾರದ ಕೈಗಾದಲ್ಲಿರುವ ಶನೇಶ್ವರ, ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಾರವಾರ ತಾಲ್ಲೂಕಿನ ಕೈಗಾದಲ್ಲಿ ಉದ್ಯೋಗಿಯಾಗಿರುವ ದರ್ಶನ್ ಭಾವ ಭಾವ ಮಂಜುನಾಥ ದರ್ಶನ ಸಂಕಷ್ಟದಿಂದ ಹೊರಬರುವಂತಾಗಲಿ, ಪ್ರಕರಣದಿಂದ ಮುಕ್ತರಾಗಬೇಕೆಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕೈಗಾ ವಸತಿ ಸಂಕೀರ್ಣದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದರ್ಶನ್ ಹೆಸರಿನಲ್ಲಿ ನವಗ್ರಹ ಪೂಜೆ, ಶನಿಶಾಂತಿ ಪೂಜೆ ಸಲ್ಲಿಸಿದ ಅವರು ಪ್ರಕರಣದಿಂದ ಬೇಗ ಮುಕ್ತರಾಗಿ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.‌