ಶ್ರೀಶೈಲ ಮಲ್ಲಿಕಾರ್ಜುನ ರಥಯಾತ್ರೆಯಲ್ಲಿ ಹರಿದು ಬಂದ ಜನಸಾಗರ

Advertisement

ಆಂಧ್ರದ ಸುಕ್ಷೇತ್ರ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ದೇವರ ಶೋಭಾ ರಥಯಾತ್ರೆಯು ರವಿವಾರ ರಬಕವಿ-ಬನಹಟ್ಟಿ ಅವಳಿ ನಗರದಲ್ಲಿ ಮೆರವಣಿಗೆ ಮೂಲಕ ಸಾಗಿ ಬರುವ ಸಂದರ್ಭ ಭಕ್ತರ ದಂಡೇ ಹರಿದು ಬಂದಿತು.ಬೆಳಿಗ್ಗೆ 9 ಗಂಟೆಗೆ ರಬಕವಿಯ ಶ್ರೀ ಮಲ್ಲಿಕಾರ್ಜುನ ದೇವಾಲಯದಿಂದ ಪ್ರಾರಂಭಗೊಂಡ ಮೆರವಣಿಗೆಯು ರಾಮಪೂರ ಮಾರ್ಗವಾಗಿ ಸುದೀರ್ಘ 3 ಕಿ.ಮೀ.ನಷ್ಟು ದೂರ ಸಾವಿರಾರು ಭಕ್ತರೊಂದಿಗೆ ಸುಮಾರು 4 ಗಂಟೆಗಳ ಕಾಲ ಮೆರವಣಿಗೆ ಸಾಗುವಲ್ಲಿ ಕಾರಣವಾಯಿತು.ಮೆರವಣಿಗೆಯ ನೇತೃತ್ವವನ್ನು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ವಹಿಸಿದ್ದರು. ಶ್ರೀಶೈಲ ಟ್ರಸ್ಟ್ನ ಮುಖ್ಯ ಆಡಳಿತ ವ್ಯವಸ್ಥಾಪಕ ಎಸ್. ಲವಣ್ಯ, ಹರಿದಾಸ, ಉಮೇಶ, ಪ್ರಧಾನ ಅರ್ಚಕರು ಈರಯ್ಯ ಸ್ವಾಮೀಜಿ, ಶರಣಬಸವ ಶಿವಾಚಾರ್ಯರು, ಬಾಲಚಂದ್ರ ಉಮದಿ (ಅಣ್ಣನವರು), ಗಜಾನನ ವಜ್ರಮಟ್ಟಿ, ಸೋಮಶೇಖರ ಭುಯ್ಯಾರ, ಪ್ರಕಾಶ ದಲಾಲ, ಮುರುಗೇಶ ಮುತ್ತೂರ, ರವಿ ಜಮಖಂಡಿ, ಅಮಿತ ನಾಶಿ, ಮಲ್ಲು ಮುತ್ತೂರ, ಬಸು ಯಾದವಾಡ, ಸುರೇಶ ಚಿಂಡಕ, ಶ್ರೀಶೈಲ ದಭಾಡಿ, ಗಂಗಪ್ಪ ಉಕ್ಕಲಿ, ಶೇಖರ ಜವಳಗಿ ಸೇರಿದಂತೆ ಅನೇಕರಿದ್ದರು.ನಗರದ ಈಶ್ವರಲಿಂಗ ಮೈದಾನದಲ್ಲಿ ಬನಹಟ್ಟಿಯ ಹಾಗು ಸುತ್ತಲಿನ ಭಕ್ತಾಧಿಗಳ ದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗಿತ್ತು.