ಬೆಳಗಾವಿ: ಶ್ರೀರಾಮ್‌ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿಟಕರ ಮೇಲೆ ಫೈರಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಆಯುಕ್ತ ಬೋರಲಿಂಗಯ್ಯ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,
ವೈಯಕ್ತಿಕ ಹಣಕಾಸು ವ್ಯವಹಾರವೇ ಘಟನೆಗೆ ಕಾರಣವೆಂದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ ಎಂದರು.
ಬೆಳಗಾವಿಯ ಶಹಾಪೂರ ವ್ಯಾಪ್ತಿಯಅಭಿಜೀತ ಭಾತಖಾಂಡೆ,ಸೇರಿದಂತೆ ಮೂವರನ್ನು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ರವಿ ಮತ್ತು ಅಭಿಜೀತ ನಡುವೆ ಮೊದಲಿನಿಂದಲೂ ಕಿತ್ತಾಟವಿತ್ತು ಹಣ ವಿಷಯಕ್ಕೆ ಈಗಾಗಲೇ ಒಂದು ಗಲಾಟೆ ಕೂಡ ನಡೆದಿತ್ರು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಡಿಸಿಪಿ ರವೀಂದ್ತ ಗಡಾದಿ, ಪಿ ವಿ ಸ್ನೇಹಾ ಅವರು ಉಪಸ್ಥಿತರಿದ್ದರು.
ಘಟನೆ ವಿವರ: ಹಿಂಡಲಗಾ ಬಳಿ ನಿನ್ನೆ ಸಂಜೆ ೭.೪೫ ರ ಸುಮಾರಿಗೆ ನಡೆದಿತ್ರು.
ಮೂವರ ಗುಂಪು ಈ ಫೈರಿಂಗ್ ಮಾಡಿತ್ತು ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಫೈರಿಂಗ್ ಮಾಡಿದವರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿ ದ್ದಾರೆ.
ಘಟನೆಯಲ್ಲಿ ವಾಹನದಲ್ಲಿದ್ದ ಕೋಕಿಟಕರ ಅವರ ಗದ್ದಕ್ಕೆ ಬುಲೆಟ್ ತಗುಲಿ ಚಾಲಕನ ಕೈಗೂ ತಾಗಿತ್ತು ಗಾಯ
ರವಿ ಕೋಕಿಟಕರ ಹಾಗೂ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು ಕೆ ಎಲ್ ಇ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.