ಶ್ರೀರಂಗಪಟ್ಟಣದಲ್ಲಿ ಹುಲಿ ಪ್ರತ್ಯಕ್ಷ: ಜನರಲ್ಲಿ ಆತಂಕ

ಹುಲಿ
Advertisement

ಶ್ರೀರಂಗಪಟ್ಟಣ: ತಾಲೂಕಿನ ಅರಕೆರೆ ಗ್ರಾಮ ಹಾಗೂ ಮಹದೇವಪುರ ಗ್ರಾಮಗಳ ಬಳಿ ಹುಲಿಯೊಂದು ಪ್ರತ್ಯಕ್ಷಗೊಂಡಿದ್ದು, ಈ ಭಾಗದ ಜನತೆ ಭಯಭೀತಗೊಂಡಿದ್ದಾರೆ.
ತಕ್ಷಣ ಕಾರ್ಯಾಚರಣೆ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದು, ಗ್ರಾಮಸ್ಥರು ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ಮಲಗಿದ್ದ ಬೃಹತ್ ಗಾತ್ರದ ಹುಲಿಯೊಂದು ವಾಹನದ ಶಬ್ದ ಗ್ರಹಿಸಿ ಪಕ್ಕದ ಜಮೀನಿಗೆ ನುಗ್ಗಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಇಷ್ಟು ದಿನ ಬೀದಿ ನಾಯಿ, ಹಂದಿ ಹಾವಳಿ ಹಾಗೂ ಚಿರತೆ ಪ್ರತ್ಯಕ್ಷದಂತಹ ದೃಶ್ಯಗಳನ್ನು ಕಂಡಿದ್ದ ಇಲ್ಲಿನ ಜನತೆ ಹುಲಿ‌ ಸಂಚಾರದಿಂದ ದಿಗ್ಭ್ರಾಂತರಾಗಿದ್ದಾರೆ.