ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಸೌಂದಲಗಾ ಗ್ರಾಮದಲ್ಲಿ ಶೆಡ್ಗೆ ಹಾಕಿದ್ದ ಸಿಮೆಂಟ್ ಪೈಪ್ ತಲೆ ಮೇಲೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಶಿವಾಜಿ ಚವ್ಹಾಣ (೪೨) ಮೃತ ವ್ಯಕ್ತಿ. ಸೋಮವಾರ ಸಂಜೆ ಸ್ನೇಹಿತರ ಜತೆ ಸೇರಿ ಪೋಕ್ಲ್ಯಾಂಡ್ ಯಂತ್ರದ ಸಹಾಯದಿಂದ ಮನೆ ಮುಂದಿನ ಶೆಡ್ಗೆ ಹಾಕಿದ್ದ ಸಿಮೆಂಟ್ ಪೈಪ್ ತೆಗೆಯುತ್ತಿದ್ದಾಗ ಪೈಪ್ ಕಳಚಿ ತಲೆಯ ಮೇಲೆ ಬಿದ್ದ ಪರಿಣಾಮ ಉತ್ತಮ ಗಂಭೀರ ಗಾಯಗೊಂಡಿದ್ದರು.
ಕೂಡಲೇ ಅವರನ್ನು ನಿಪ್ಪಾಣಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಅಲ್ಲಿಂದ ಕೊಲ್ಹಾಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಯಿತು. ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬಾರದ್ದರಿಂದ ಬುಧವಾರ ಬೆಳಗ್ಗೆ ಕೊಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಮೃತ ಉತ್ತಮ್ ಅಂತ್ಯಕ್ರಿಯೆ ಗುರುವಾರ ನೆರವೇರಿತು.