ಶೆಟ್ಟರ ಪಕ್ಷ ತೊರೆದಿದ್ದು ತಪ್ಪು

Advertisement

ಹುಬ್ಬಳ್ಳಿ: ಜಗದೀಶ ಶೆಟ್ಟರ ಕೇವಲ ಒಂದೇ ಒಂದು ಸೀಟಿಗಾಗಿ ಪಕ್ಷ ತೊರೆದದ್ದು ನಿಜಕ್ಕೂ ಖೇದಕರ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಮತ್ತು ಜಗದೀಶ ಶೆಟ್ಟರಗೆ ಏಕ ಕಾಲಕ್ಕೆ ವರಿಷ್ಠರು ಕರೆ ಮಾಡಿದ್ದರು. ನೀವಿಬ್ಬರೂ ಚುನಾವಣೆ ರಾಜಕೀಯದಿಂದ ನಿವೃತ್ತರಾಗಿ. ಹಿರಿಯರಾದ ನಿಮಗೆ ಹಲವು ಚುನಾವಣೆ ಎದುರಿಸಿದ ಅನುಭವವಿದೆ. ಹೀಗಾಗಿ, ಯುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ಮಾಡುವ ಮತ್ತು ಬೇರೆ ಬೇರೆ ಜವಾಬ್ದಾರಿಗಳನ್ನು ನೀಡುವ ಬಗ್ಗೆ ತಿಳಿಸಿದ್ದರು.
ಯುವ ಅಭ್ಯರ್ಥಿಗಳಿಗೆ ಅದರಲ್ಲೂ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ನಿಟ್ಟನಲ್ಲಿ ನನ್ನ ಮತ್ತು ಜಗದೀಶ ಶೆಟ್ಟರ ಸೊಸೆಗೆ ಟಿಕೆಟ್ ನೀಡಲು ಪಕ್ಷ ಸಿದ್ಧವಿತ್ತು. ಆದರೆ, ಈ ವಿಚಾರವಾಗಿ ಜಗದೀಶ ಶೆಟ್ಟರ ಧೋರಣೆ ತಪ್ಪು ಎಂದರು.