ಶೆಟ್ಟರ್ ಟಿಕೆಟ್ ನಿರಾಕರಣೆಗೆ ನಡ್ಡಾ ಸಮರ್ಥನೆ

Advertisement

ಹುಬ್ಬಳ್ಳಿ: ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ನಿರಾಕರಣೆ ಮಾಡಿರುವ ಪಕ್ಷದ ಕ್ರಮ ಸರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಂಗಳವಾರ ಇಲ್ಲಿ ಬಲವಾಗಿ ಪ್ರತಿಪಾದಿಸಿದರು.
ಬಿವಿಬಿ ಕಾಲೇಜಿನಲ್ಲಿ ಪಕ್ಷ ಹಮ್ಮಿಕೊಂಡಿದ್ದ ಪ್ರಬುದ್ಧರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಈ ಅನಿಸಿಕೆ ವ್ಯಕ್ತಪಡಿಸಿದರು. ನೇರವಾಗಿ ಜಗದೀಶ ಶೆಟ್ಟರ ಹೆಸರನ್ನು ಪ್ರಸ್ತಾಪಿಸದ ಅವರು, `ಪ್ರಜಾಸತ್ತಾತ್ಮಕವಾಗಿ ಬಿಜೆಪಿ ಏನು ಮಾಡಬೇಕೋ ಅದನ್ನು ಮಾಡಿದೆ; ನಾವು ಮಾಡಿದ್ದು ಸಂಪೂರ್ಣ ಸರಿಯಾಗಿದೆ’ ಎಂದು ಹೇಳುವ ಮೂಲಕ ಶೆಟ್ಟರ ಬದಲಿಸುವ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು.