ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ನಿರಾಕರಣೆ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಪಾರ ಬೆಂಬಲಿಗರು ಶೆಟ್ಡರ ಮನೆಯತ್ತ ದೌಡಾಯಿಸಿದ್ದಾರೆ.
ಮನೆ ಮುಂದೆ ಜಮಾವಣೆಗೊಂದ ಬೆಂಬಲಿಗರು ಘೋಷಣೆ ಕೂಗಿ ಜೈಕಾರ ಹಾಕುತ್ತಿದ್ದಾರೆ.
ಕರ್ನಾಟಕದ ಅಟಲ್ ಬಿಹಾರ ವಾಜಪೇಯಿ, ಸೋಲಿಲ್ಲದ ಸರದಾರ ಶೆಟ್ಟರ, ಮತ್ತೊಮ್ಮೆ ಜಗದೀಶ ಶೆಟ್ಡರ ಎಂದು ಘೋಷಣೆ ಕೂಗುತ್ತಿದ್ದಾರೆ.
ಮಾಜಿ ಶಾಸಕ ಎಸ್.ಐ ಚಿಕ್ಕನಗೌಡರ, ಮೇಯರ್ ಈರೇಶ ಅಂಚಟಗೇರಿ ಸೇರದಂತೆ ಅನೇಕರು ಆಗಮಿಸಿದ್ದಾರೆ.