ಶೆಟ್ಟರಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ ಶಾಮನೂರು

ಶಾಮನೂರು
Advertisement

ದಾವಣಗೆರೆ: ಬಿಜೆಪಿಯ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಿಎಂ, ಶಾಮನೂರು ಕುಟುಂಬದ ಬೀಗರಾಗಿರುವ ಜಗದೀಶ್ ಶೆಟ್ಟರಗೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದು, ಅವರನ್ನು ನಾವು ಕಾಂಗ್ರೆಸ್ ಆಹ್ವಾನಿಸುತ್ತಿದ್ದೇವೆ. ಈ ಬಗ್ಗೆ ಬೀಗರ (ಶೆಟ್ಟರ್) ಜೊತೆ ನಮ್ಮ ಪುತ್ರ ಮಾತನಾಡುತ್ತಾನೆ ಎಂದರು.
ಶೆಟ್ಟರ್ ಸಲುವಾಗಿಯೇ ಹುಬ್ಬಳ್ಳಿ ಕೇಂದ್ರ ಕ್ಷೇತ್ರ ಖಾಲಿ ಬಿಡಲಾಗಿದೆ. ಶೆಟ್ಟರ್ ಟಿಕೆಟ್ ಕೊಟ್ಟರೆ ಮಾತ್ರ ಕಾಂಗ್ರೆಸಗೆ ಸೇರುತ್ತಾರೆ. ಇಲ್ಲದಿದ್ದರೆ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದರು.