ಶೃಂಗಸಭೆ ಎಂಟು ಬೈಠಕ್ ಗೋವೆಯಲ್ಲಿ

Pramod Sawant
Advertisement

ಪಣಜಿ: ಅಂತಾರಾಷ್ಟ್ರೀಯ ಮಟ್ಟದ ಜಿ-೨೦ ಶೃಂಗಸಭೆಯ ಎಂಟು ಸಭೆಗಳು ಗೋವಾದಲ್ಲಿ ನಡೆಯಲಿವೆ. ಮೊದಲ ಮೂರು ದಿನಗಳ ಸಭೆಯು ಏಪ್ರಿಲ್ ೧೭ ರಿಂದ ೧೯ ರವರೆಗೆ ಪಂಚತಾರಾ ಹೋಟೆಲ್‌ಗಳಾದ ತಾಜ್ ಮತ್ತು ಗ್ರ್ಯಾಂಡ್ ಹಯಾತ್‌ನಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.
ಪಣಜಿಯಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ಜಿ-೨೦ ಶೃಂಗಸಭೆಗಳ ನಡುವಿನ ಮೊದಲ ಸಭೆಯು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದೆ. ಜಿ-೨೦ ಸಭೆ ಮುನ್ನ ಪಣಜಿಯಲ್ಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ಸಾರಿಗೆ ಸಚಿವ ಮಾವಿನ್ ಗುದಿನ್ಹೊ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ವಿಶೇಷ ಪ್ರಯತ್ನ ನಡೆಸುತ್ತಿದೆ. ಮುಂದಿನ ವರ್ಷದೊಳಗೆ ಇನ್ನೂ ೧,೦೦೦ ನಿರುದ್ಯೋಗಿ ಯುವಕರನ್ನು ಟ್ಯಾಕ್ಸಿ ಉದ್ಯಮಕ್ಕೆ ತರಲಾಗುವುದು ಎಂದರು.