ಹುಬ್ಬಳ್ಳಿ : ಸರ್ವೇಯರ್ ಕೊರತೆ ಬಹಳ ದಿನಗಳಿಂದ ಇತ್ತು. ಪರಿಹಾರ ಕಂಡುಕೊಳ್ಳಲು ಸರ್ವೇಯರ್ ನೇಮಕಾತಿ ಮಾಡಿಕೊಳ್ಳುತ್ತಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.
750 ಪರವಾನಗಿ ಪಡೆದ ಸರ್ವೇಯರ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಇವರನ್ನು ಯಾವ್ಯಾವ ತಾಲೂಕಿನಲ್ಲಿ ಸರ್ವೇ ಕಾರ್ಯ ಹೆಚ್ಚು ಪೆಂಡಿಂಗ್ ಇದೆಯೋ ಅಂತಹ ತಾಲೂಕಿಗೆ ಹಂಚಿಕೆ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರವೇ ಪ್ರಥಮ ಹಂತದಲ್ಲಿ 357 ಸರ್ಕಾರಿ ಸರ್ವೇಯರ್ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಕೆಪಿಎಸ್ ಸಿಯೊಂದಿಗೆ ಮಾತುಕತೆ ನಡೆಸಿ ಶೀಘ್ರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು. ಇದಾದ ಬಳಿಕ 2 ಹಂತದಲ್ಲಿ 592 ಸರ್ವೇಯರ್ ನೇಮಕ ಮಾಡಿಕೊಳ್ಳಲಾಗುತ್ತದೆ. ಮುಖ್ಯಮಂತ್ರಿಯವರೂ ಒಪ್ಪಿಗೆ ಸೂಚಿಸಿದ್ದಾರೆ ಎಂದರು. ಈ ಪ್ರಕ್ರಿಯೆಯಿಂದ ಒಟ್ಟಾರೆ ಸರ್ವೇ ಇಲಾಖೆಯಲ್ಲಿದ್ದ ಸರ್ವೇಯರ್ ಕೊರತೆ ಎರಡು ವರ್ಷದಲ್ಲಿ ಬಹುತೇಕ ನೀಗಲಿದೆ ಎಂದು ತಿಳಿಸಿದರು.