ಶೀಘ್ರದಲ್ಲೇ ಕೇಬಲ್​​ ಬ್ರಿಡ್ಜ್​​ ಮಾದರಿಯಲ್ಲಿ ದುರಸ್ಥಿ ಮಾಡಲಾಗುವುದು : ಸಿ.ಎಂ ಬೊಮ್ಮಾಯಿ

Advertisement

ಬೆಂಗಳೂರು: ಕೇಂದ್ರ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರೊಂದಿಗೆ ಗೊರಗುಂಟೆಪಾಳ್ಯದ ಫ್ಲೈಓವರ್​​​​​​ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ.ಪಿಲ್ಲರ್​ಗಳಲ್ಲಿ ಉಂಟಾಗಿರುವ ದೋಷದ ಹಿನ್ನೆಲೆಯಲ್ಲಿ ಕಳೆದ ಐದಾರು ತಿಂಗಳುಗಳೇ ಕಳೆದಿವೆ. ಇದೀಗ ಮೇಲ್ಸೇತುವೆಯನ್ನು ಮರು ಬಳಕೆ ಮಾಡುವ ಸಂಬಂಧ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಕೇಬಲ್​​ ಬ್ರಿಡ್ಜ್​​ ಮಾದರಿಯಲ್ಲಿ ದುರಸ್ಥಿ ಮಾಡಲಾಗುವುದು ಎಂದು ಸಿ.ಎಂ.ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.