ಶಿವಚರಿತ್ರೆ ಲೋಕಾರ್ಪಣೆಗೆ ಕ್ಷಣಗಣನೆ

Advertisement

ಬೆಳಗಾವಿ: ಬಹುನಿರೀಕ್ಷಿತ ಮತ್ತು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಕನಸಿನ ಕೂಸಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಬಿಂಬಿಸುವ ಶಿವಚರಿತ್ರೆ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 5.30 ಕ್ಕೆ ಪ್ರಖರ ಹಿಂದುತ್ವವಾದಿ ಆಸ್ಸಾಂನ ಮುಖ್ಯಮಂತ್ರಿ ಸೇರಿದಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮರಾಠಾ ಪ್ರಾಧಿಕಾದ ಅಧ್ಯಕ್ಷ ಮಾರುತಿ ಮುಳೆ ಮತ್ತಿತರರು ಉಪಸ್ಥಿತರಿರಲಿದ್ದಾರೆ,
ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಯಶಸ್ವಿಗೊಳಿಸಿದ ನಂತರ ಅತ್ಯಂತ ಅಚ್ಚುಕಟ್ಟು ಮತ್ತು ಸುಂದರ ಕಾರ್ಯಕ್ರಮ ಇದಾಗಲಿದೆ. ಇದಕ್ಕಾಗಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಕಳೆದ ಹಲವು ದಿನಗಳಿಂದ ಕಾರ್ಯಕ್ರಮದ ಯಶಸ್ವಿಗಾಗಿ ರಾತ್ರಿ ಹಗಲು ಎನ್ನದೇ ದುಡಿಯುತ್ತಿದ್ದಾರೆ,
ಅಷ್ಟೇ ಅಲ್ಲ ನಗರಸೇವಕರೂ ಕೂಡ ತಮ್ಮ ವಾರ್ಡನ ಕಾರ್ಯಕರ್ತರನ್ನು ಸೇರಿಸಿ ಶಾಸಕರ ಕಾರ್ಯಕ್ಕೆ ಕೈಜೋಡಿಸಿದರು.
ಕೇಸರಿಮಯ: ಶಿವಚರಿತ್ರೆ ಹಿನ್ನೆಲೆಯಲ್ಲಿ ಆ ಪ್ರದೇಶವನ್ನು ಕೇಸರಿಮಯ ಮಾಡಲಾಗಿದೆ, ರಸ್ತೆಯ ಇಕ್ಕೆಲ್ಲಗಳಲ್ಲಿ ಭಗವಾ ಧ್ವಜವನ್ನು ಕಟ್ಟಲಾಗಿದೆ. ಅಲ್ಲಲ್ಲಿ ಸ್ವಾಗತ ಕಮಾನುಗಳು ಎದ್ದು ನಿಂತಿವೆ.