ಶಾಸಕರ ವಿರುದ್ದ ತಿರುಗಿ ಬಿದ್ದ ಸಾರ್ವಜನಿಕರು

fight
Advertisement

ಕೋಲಾರ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರನ್ನು ಓಲೈಸಲು ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತುಗಳು ನಡೆಸುತ್ತಿದ್ದು ಅದರ ಭಾಗವಾಗಿ ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಪಟ್ಟಣದ ಸಿ.ರಹೀಂ ಕಾಂಪೌಂಡ್‌ನಲ್ಲಿ ಆ ಪ್ರದೇಶದ ಮುಸಲ್ಮಾನ್ ಜನಾಂಗದವರನ್ನು ಸೇರಿಸಿ ಅವರಿಗೆ ಸ್ಪೆಟರ್ ವಿತರಿಸಿ ಈ ಭಾರಿ ನನಗೆ ಮತ ನೀಡಿ ಜೆಡಿಎಸ್ ಗೆ ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದಂತೆ ಎಂದು ಅಪಪ್ರಚಾರ ಮಾಡಲು ಮುಂದಾದಾಗ ಅಲ್ಲಿನ ಸ್ಥಳೀಯ ಯುವಕರು ಶಾಸಕರ ಮಾತಿಗೆ ವಿರೋಧ ವ್ಯಕ್ತಪಡಿಸಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಂಸದರನ್ನು ನೀವೆ ಗೆಲ್ಲಿಸಿ, ಬಿಜೆಪಿ ಸಂಸದರು ಜಿಲ್ಲೆಯಲ್ಲಿ ಮುಸಲ್ಮಾನ್ ಜನಾಂಗದವರಿಗೆ ಕಿರುಕುಳ ನೀಡುತ್ತಿದ್ದರೆ ಸುಮ್ಮನಿದ್ದು ಇದೀಗ ಜೆಡಿಎಸ್ ಮೇಲೆ ಅಪಪ್ರಚಾರ ಮಾಡುತ್ತಿದ್ದೀರ ಎಂದು ಶಾಸಕರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು, ಸ್ಥಳೀಯರ ಮೇಲೆ ತಿರುಗಿ ಬಿದ್ದ ಶಾಸಕರು ಮತ್ತು ಸಾರ್ವಜನಿಕರ ನಡುವೆ ಮೇಲೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು .. ನಂತರ ಅಲ್ಲಿ ನೆರೆದಿದ್ದ ಕೆಲವರು ಶಾಸಕರನ್ನು ಅಲ್ಲಿಂದ ಕರೆದೊಯ್ದರು…