ಕೋಲಾರ: ಹದಗೆಟ್ಟ ರಸ್ತೆ, ಮೂಲಭೂತ ಸಮಸ್ಯೆ ಬಗೆಹರಿಸಲು ಬಂದಿಲ್ಲ. ಈಗ ಉದ್ಘಾಟನೆಗೆ ಬಂದಿದ್ದೀರಾ ಎಂದು ಶಾಸಕ ಶ್ರೀನಿವಾಸಗೌಡರನ್ನೇ ಯುವಕರು ತರಾಟೆಗೆ ತೆಗೆದುಕೊಂಡ ಘಟನೆ ಹೊನ್ನೇನಹಳ್ಳಿ ಗ್ರಾಮ ಪಂಚಾಯ್ತಿ ಎದುರು ಇಂದು ನಡೆದಿದೆ.
ಹೊನ್ನೇನಹಳ್ಳಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಉದ್ಘಾಟನೆಗೆ ಬಂದಿದ್ದ ಶಾಸಕ ಶ್ರೀನಿವಾಸಗೌಡರಿಗೆ, ಹೊನ್ನೇನಹಳ್ಳಿಯಲ್ಲಿ ಮೂಲಭೂತ ಸಮಸ್ಯೆ ಬಗೆಹರಿಸುವಲ್ಲಿ ನಿಮ್ಮ ಪಾತ್ರವೇನು? ಇದುವರೆರಗೂ ಗ್ರಾಮಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಯುವಕರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು.